ಉದಯವಾಹಿನಿ: ಬೆಂಗಳೂರು: ಬೆಂಗಳೂರಿನಲ್ಲಿ ಎಐಜಿಪಿ ಆಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಡಾ.ಸಂಜೀವ್ ಎಂ. ಪಾಟೀಲ್ ಅವರಿಗೆ ಪ್ರಸಕ್ತ ಸಾಲಿನ ರಾಷ್ಟ್ರಪತಿ ಸೇವಾ ಪದಕ ದೊರೆತಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪ್ರಶಸ್ತಿ ಪ್ರದಾನ ಮಾಡುವರು. ದಿನಾಂಕ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಡಾ. ಸಂಜೀವ್ ಮೂಲತಃ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು ವಳಗೇರಿ ಗ್ರಾಮದವರು.ಆರೋಗ್ಯಇಲಾಖೆಯ ಹಿರಿಯ ನಿರ್ದೇಶಕರಾಗಿದ್ದ ದಿ. ಡಾ.ಎಂ.ಆರ್. ಪಾಟೀಲ ಅವರ ಪುತ್ರ. ಡಾ.ಸಂಜೀವ್ ಪಾಟೀಲ ಅವರು ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಂಗಳೂರು ಪಶ್ಚಿಮ ಕಮೀಷನರೇಟ್ ನ ಡಿಸಿಪಿಯಾಗಿ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ ಕಡಖ್ ಪೊಲೀಸ್ ಅಧಿಕಾರಿ ಎಂದು ಹೆಸರು ಗಳಿಸಿದ್ದಾರೆ.
