ಉದಯವಾಹಿನಿ, ಚಿಕ್ಕಬಳ್ಳಾಪುರ: ತಂಪಾದ ಆದರೆ ಪ್ರಕಾಶಮಾನವಾದ ಭಾನುವಾರದ ಬೆಳಗ್ಗೆ ೭:೩೦ಕ್ಕೆ ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ ಸಂದರ್ಶಕರು, ಅಲ್ಲಿಯ ನಿವಾಸಿಗಳು ಮತ್ತು ಸ್ವಯಂಸೇವಕರೊಂದಿಗೆ ೭೬ನೇ ಗಣರಾಜ್ಯೋತ್ಸವವನ್ನು ಆಚರಿಸಿದರು.
ಅವಲಗುರ್ಕಿ ಪಂಚಾಯತ್ನ ಅಧ್ಯಕ್ಷೆ ಶ್ರೀಮತಿ ಎ. ನೇತ್ರಾ ಮತ್ತು ಅವರ ಪತಿ ಶ್ರೀ ಸತೀಶ್ ರವರು ಈ ಸಂಕ್ಷಿಪ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಪಂಚಾಯತ್ ಅಧ್ಯಕ್ಷೆಯು ಆದಿಯೋಗಿ-ನಾಗ ಪ್ಲಾಜಾದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ರಾಷ್ಟ್ರಗೀತೆಯ ನಂತರ, ಸದ್ಗುರು ಸನ್ನಿಧಿಯ ’ಸೌಂಡ್ಸ್ ಆಫ್ ಈಶ’ ತಂಡದ ಸ್ವಯಂಸೇವಕರು ಕನ್ನಡದಲ್ಲಿ ದೇಶಭಕ್ತಿ ಗೀತೆಯನ್ನು ಹಾಡಿದರು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸದ್ಗುರುಗಳ ಸಂದೇಶವನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಓದುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಸದ್ಗುರು ಸನ್ನಿಧಿಯನ್ನು ಅಕ್ಟೋಬರ್ ೨೦೨೨ರಲ್ಲಿ ನಾಗ ಪ್ರತಿಷ್ಠಾಪನೆಯೊಂದಿಗೆ ಸಾರ್ವಜನಿಕರಿಗೆ ತೆರೆಯಲಾಯಿತು. ನಾಗನ ಜೊತೆಗೆ, ಸನ್ನಿಧಿಯು ಪ್ರತಿಷ್ಠಿತ ‘ಆದಿಯೋಗಿ’ ಮತ್ತು ‘ನಂದಿಗೆ ನೆಲೆಯಾಗಿದೆ. ಕಳೆದ ವರ್ಷ ಮಕರ ಸಂಕ್ರಾಂತಿಯಂದು ಸದ್ಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಮಹಾಶೂಲವನ್ನು ಈ ವರ್ಷದ ಮಕರ ಸಂಕ್ರಾಂತಿಯಂದು ಸಾರ್ವಜನಿಕರಿಗೆ ಅನಾವರಣಗೊಳಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವವನ್ನು ಪ್ರತಿ ವರ್ಷ ಸದ್ಗುರು ಸನ್ನಿಧಿಯಲ್ಲಿ ವಿಶೇಷ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ.
