ಉದಯವಾಹಿನಿ, ದೆಹಲಿ: ಗಡಿಯಲ್ಲಿ ಕೃಷಿ ಉತ್ಪನ್ನಗಳಿಗೆ ಎಂಎಸ್‍ಪಿ ಗ್ಯಾರಂಟಿ ಕಾನೂನು ಜಾರಿಗೆ ಒತ್ತಾಯಿಸಿ ರಾಷ್ಟ್ರೀಯ ರೈತ ನಾಯಕ ದಲೈವಾಲಾ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಮೈಸೂರಿನಲ್ಲಿ ಕಬ್ಬು ಬೆಳೆಗಾರರ ಸಂಘದಿಂದ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಯಿತು. ಪ್ರತಿಭಟನಾ ರ್ಯಾಲಿಯಲ್ಲಿ ರೈತ ಮುಖಂಡರಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಪಿ.ಸೋಮಶೇಖರ್, ಕಿರಗಸೂರು ಶಂಕರ್, ನೀಲಕಂಠಪ್ಪ, ವಿಜಯೇಂದ್ರ, ಸಿದ್ದೇಶ್, ವೆಂಕಟೇಶ್, ರಾಜೇಶ್, ಪ್ರಭುಸ್ವಾಮಿ, ಮಂಜುನಾಥ್, ಗಿರೀಶ್, ಕೆಂಡಗಣಸ್ವಾಮಿ, ಸ್ವಾಮಿ ಪ್ರಸಾದ್ ನಾಯ್ಕ್, ಪ್ರದೀಪ್ ಗೌರಿಶಂಕರ್, ಗುರುಸ್ವಾಮಿ, ಕೆಂಡಗಂಣಪ್ಪ, ಸುನಿಲ್, ಕಮಲಮ್ಮ, ಕೂಡನಹಳ್ಳಿ ಸೋಮಣ್ಣ, ನಾಗೇಶ್, ಸೂರಿ, ಅರುಣ್, ಲಿಂಗಣ್ಣ, ಕಾರ್ಟೂರ್ ಮಾದೇವಸ್ವಾಮಿ, ನಾಗೇಶ, ಮಾರ್ವಳ್ಳಿ ಬಸವರಾಜ್, ಚುಂಚರಾಯನಹುಂಡಿ ಬಸವರಾಜಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
