ಉದಯವಾಹಿನಿ, ಮೈಸೂರು: ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ವ್ಯಾಖ್ಯಾನ ಮಾಡಿದರೂ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೇ ಮುಂದುವರೆಯುತ್ತಿರುವುದು ಅಧರ್ಮ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಮುಡಾ ಸೈಟ್ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದು, ರಾಜ್ಯಪಾಲರ ಆದೇಶದ ವಿರುದ್ಧ ಸಿಎಂ ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯವೂ ಸಿದ್ದರಾಮಯ್ಯ ವಿರುದ್ಧ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಟಿಪ್ಪಣಿಯನ್ನು ಯಾವ ಕೋರ್ಟ್ ತೆಗೆದುಹಾಕಿಲ್ಲ. ಹೈಕೋರ್ಟ್ ಕಮೆಂಟ್ ಮಾಡಿದ ನಂತರವೂ ಅವರು ಸಿಎಂ ಸ್ಥಾನಲ್ಲಿ ಮುಂದುವರೆಯುತ್ತಿರುವುದೇ ಅಧರ್ಮ ಎಂದು ಟೀಕಿಸಿದರು. ಪೊಲೀಸ್ ಕುಮ್ಮಕ್ಕು ವಿರುದ್ಧ ಕ್ರಮ ಕೈಗೊಳ್ಳಿ ಮೈಕ್ರೋ ಫೈನಾನ್ಸ್ ಮರುಪಾವತಿ ವಿಚಾರದಲ್ಲಿ ಕಂಪನಿಯ ಏಜೆಂಟರು ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ, ಪರಿಶೀಲನೆ ಮಾಡಬೇಕು. ಮೈಕ್ರೋ ಫೈನಾನ್ಸ್ ಆರ್‌ಬಿಐ ಗೈಡ್‌ಲೈನ್ಸ್‌ಗೆ ಒಳಪಡುತ್ತದೆ. ಯಾವ ಕಂಪನಿಗಳು ಆರ್‌ಬಿಐ ನೀತಿಗೆ ಒಳಪಡಲ್ಲವೋ ಅಂತ ಕಂಪನಿಗಳ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಗೈಡ್‌ಲೈನ್ ನಿಯಮ ಪಾಲಿಸಿಲ್ಲ ಅನ್ನೋ ಕಂಪನಿಗಳ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು.
