ಉದಯವಾಹಿನಿ, ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಎದುರಾಳಿ ಗ್ಯಾಂಗ್‌ನ ಯುವಕನನ್ನು ಬರ್ಭರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಮೂವರು ಹಂತಕರಿಗೆ ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿರುವ ಘಟನೆ ವಿದ್ಯಾನಗರದಲ್ಲಿ ಇಂದು ಮುಂಜಾನೆ ನಡೆದಿದೆ. ಕಳೆದ ರಾತ್ರಿ ವಿದ್ಯಾನಗರದ ಗೋಲ್ಡನ್ ಹಟ್‌್ಸ ಬಾರ್ ಅಂಡ್ ಫ್ಯಾಮಿಲಿ ರೆಸ್ಟೋರೆಂಟ್‌ನ ಪಾರ್ಕಿಂಗ್ ಜಾಗದಲ್ಲಿ ಹಳೆ ಹುಬ್ಬಳ್ಳಿಯ ಇಂದ್ರಪ್ರಸ್ಥನಗರದ ನಿವಾಸಿ ಆಕಾಶ್ ವಾಲೀಕಿ(22) ಎಂಬಾತನನ್ನು ಚಾಕುವಿನಿಂದ ಇರಿದು ಬರ್ಭರವಾಗಿ ಹತ್ಯೆ ಮಾಡಲಾಗಿತ್ತು.
ದೇಹದ ಹಲವು ಭಾಗಕ್ಕೆ ಮನಬಂದಂತೆ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಸಾರ್ವಜನಿಕರು ಇದನ್ನು ನೋಡಿ ಬೆಚ್ಚಿಬಿದ್ದಿದ್ದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಇಂದು ಮುಂಜಾನೆ ಹಂತಕರು ಅಡಗಿದ್ದ ಎಂಟಿಎಸ್ ಕಾಲೋನಿಯ ಪ್ರದೇಶಕ್ಕೆ ಪೊಲೀಸ್ ತಂಡ ತಲುಪಿದಾಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಶರಣಾಗುವಂತೆ ಹಂತಕರಿಗೆ ಎಚ್ಚರಿಕೆ ನೀಡಿದರೂ ಲೆಕ್ಕಿಸದೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದಾಗ ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಪೊಲೀಸರ ಎಚ್ಚರಿಕೆಯನ್ನೂ ಲೆಕ್ಕಿಸದೆ ಅವರ ಮೇಲೆಯೇ ದಾಳಿಗೆ ಮುಂದಾದಾಗ ಇನ್‌ಸ್ಪೆಕ್ಟರ್‌ಗಳು ಹಾರಿಸಿದ ಗುಂಡು ಮೂವರ ಆರೋಪಿಗಳ ಕಾಲಿಗೆ ತಗಲಿ ಕುಸಿದು ಬಿದ್ದಿದ್ದಾರೆ.
