ಉದಯವಾಹಿನಿ : ಧಾರವಾಡ : ಇನ್ಟ್ಸಾಗ್ರಾಂ ಕುರುಡು ಪ್ರೀತಿಗೆ ಮರುಳಾಗಿ ಗಂಡನನ್ನೂ ಬಿಟ್ಟು ಬಂದ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.ಈ ಸಂಭಂದ ಧಾರವಾಡ ಉಪನಗರ ಠಾಣೆ ಪೊಲೀಸರು ಪ್ರಿಯಕರನನ್ನು ವಿಜಯ ನಾಯ್ಕರ್‌ನನ್ನು ಬಂಧಿಸಿದ್ದರೆ. ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಯುವಕ ವಿಜಯ ನಾಯ್ಕರ್. ಈತ ರಾಮದುರ್ಗದ ಶ್ವೇತಾ ಗುಡದಾಪುರ ಎಂಬಾಕೆಯನ್ನು ಇನ್ಸಾಟಾಗ್ರಾಂನಲ್ಲಿ ಮೂಲಕ ಪರಿಚಯ ಮಾಡಿಕೊಂಡು ನಂತರ ಪ್ರೀತಿಗೆ ತಿರುಗಿತ್ತು.
ಈ ಮೊದಲೇ ಮದುವೆ ಕೂಡ ಆಗಿದ್ದ ಶ್ವೇತಾ, ವಿಜಯ್ ಬೀಸಿದ್ದ ಪ್ರೀತಿಯ ಬಲೆಗೆ ಬಿದ್ದೇ ಬಿಟ್ಟಿದ್ದಳು. ಗಂಡನಿಗೂ ಗೊತ್ತಾಗದಂತೆ ಆತನ ಬೆನ್ನು ಹತ್ತಿ ಬಂದು ಧಾರವಾಡದ ಶ್ರೀನಗರ ಬಡಾವಣೆಯ ಬಾಡಿಗೆ ಮನೆಯಲ್ಲಿದ್ದಳು. ವಿಜಯ್ ಅಲ್ಲಿಗೆ ಬಂದು ಹೋಗುತ್ತಿದ್ದ ,ಇಬ್ಬರೂ ಮದುವೆ ಕೂಡ ಆಗಬೇಕು ಎಂದುಕೊಂಡಿದ್ದರು. ಆದರೆ ಈ ನಡುವೆ ಶ್ವೇತಾಳನ್ನು ಪತ್ತೆ ಹಚ್ಚಿ ಕರೆದುಕೊಂಡು ಹೋಗಲು ಆಕೆಯ ಪತಿ ಹಾಗೂ ಪಾಲಕರು ಬಂದಿದ್ದಾಗ ಅವರಿಗೆ ರೋಪಿ ವಿಜಯ್ ಬೆದರಿಕೆ ಹಾಕಿ ಕಳುಹಿಸಿದ್ದಂತೆ. ಅದಾದ ಬಳಿಕ ವಿಜಯ್ ಹಾಗೂ ಶ್ವೇತಾಳ ಮಧ್ಯೆ ಕಲಹ ಉಂಟಾಗಿತ್ತುಆತಹತ್ಯೆ ಮಾಡಿಕೊಂಡಿದ್ದಾಳೆ.ತನ್ನ ಕೈಯಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದುಕೊಂಡು ನೇಣಿಗೆ ಶರಣಾಗಿದ್ದಳು. ಆದರೆ ಈ ಸಾವಿಗೆ ವಿಜಯನೇ ಕಾರಣ ಎಂದು ಶ್ವೇತಾ ಮನೆಯವರು ದೂರು ದಾಖಲಿಸಿದ್ದರಿಂದ ಇದೀಗ ಪೊಲೀಸರು ವಿಜಯ್‌ನನ್ನು ಬಂಧಿಸಿದ್ದಾರೆ.
