ಉದಯವಾಹಿನಿ, ಪ್ರಯಾಗ್ರಾಜ್ : ಗಂಗಾನದಿ ತ್ರಿವೇಣಿ ಸಂಗಮದಲ್ಲಿ ಮೌನಿ ಅಮವಾಸ್ಯೆಯಂದು ಸ್ನಾನ ಮಾಡಲು ದೂರದ ಉತ್ತರಪ್ರದೇಶದಲ್ಲಿರುವ ಪ್ರಯಾಗ್ರಾಜ್ಗೆ ತೆರಳಿದ್ದ ಕರ್ನಾಟಕದ ಹಲವು ಭಕ್ತರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಕರ್ನಾಟಕದ ಬೆಳಗಾವಿ ಜಿಲ್ಲೆಯಿಂದ ಪ್ರಯಾಗ್ರಾಜ್ಗೆ ತೆರಳಿದ್ದ ಹಲವು ಮಂದಿ ಕಾಲ್ತುಳಿತದಿಂದ ನಾಪತ್ತೆಯಾಗಿದು ಇವರನ್ನುಪತ್ತೆ ಮಾಡುವುದೇ ಬಹುದೊಡ್ಡ ಸಮಸ್ಯೆ ಯಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಬೆಳಗಾವಿಯಿಂದ ಪ್ರಯಾಗ್ರಾಜ್ಗೆ ಒಟ್ಟು 60 ಮಂದಿ ಕುಂಭಮೇಳದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಬುಧವಾರ ತ್ರಿವೇಣಿ ಸಂಗಮದಲ್ಲಿ ಮೌನಿ ಅಮವಾಸ್ಯೆ ದಿನದಂದು ಎಲ್ಲರೂ ಪವಿತ್ರ ಸ್ನಾನ ಮುಗಿಸಿ ಹಿಂತಿರುಗಲು ತೀರ್ಮಾನಿಸಿದ್ದರು.
60 ಮಂದಿಯಲ್ಲಿ ತಲಾ 6 ಜನರಂತೆ 10 ಗುಂಪನ್ನು ವಿಂಗಡಣೆ ಮಾಡಲಾಗಿತ್ತು. ಇದಕ್ಕಿದ್ದಂತೆ ಮಧ್ಯರಾತ್ರಿ ಸ್ನಾನ ಮಾಡಲು ಘಾಟ್ಗೆ ತೆರಳುತ್ತಿದ್ದ ವೇಳೆ ಏಕಾಏಕಿ ನೂಕುನುಗ್ಗಲು ಉಂಟಾಗಿದೆ.ಕೆಲವರು ಸ್ಥಳದಲ್ಲಿ ಹಾಕಿದ್ದ ಬ್ಯಾರಿಕೇಡ್ಗಳನ್ನು ತಳ್ಳಿ, ಅವುಗಳನ್ನು ಮುರಿದು ಸ್ನಾನ ಮಾಡಲು ಮುನ್ನುಗ್ಗಿದ ವೇಳೆ ಕಾಲ್ತುಳಿತ ಉಂಟಾಗಿದೆ.

Leave a Reply

Your email address will not be published. Required fields are marked *

error: Content is protected !!