ಉದಯವಾಹಿನಿ, ಚನ್ನಮ್ಮನ ಕಿತ್ತೂರು : ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಲ್ಲಿ ಉತ್ತಮ ಸಂಸ್ಕøತಿ ಬೆಳೆಸುವುದರ ಜೊತೆಗೆ ಅವರನ್ನು ಸಬಲರನ್ನಾಗಿಸಲು ಶಿಕ್ಷಣದ ಅವಶ್ಯಕತೆಯಿದೆ ಎಂದು ಧಾರವಾಡದ ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದೀ ಸಂಸ್ಥೆಯ ಸಂಸ್ಥಾಪಕ ಡಾ. ಇಸಾಬೆಲಾ ಝೇವಿಯರ್ ಹೇಳಿದರು.
ರಾಜಗುರು ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಿ.ಎಂ.ಎಸ್. ಆಂಗ್ಲ ಮಾಧ್ಯಮ ವಾರ್ಷಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದು ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳಿಂದ ಹೊರಬರಲು ಎಲ್ಲದರಲ್ಲೂ ಅವರನ್ನು ಪೆÇ್ರೀತ್ಸಾಹಿಸಿ ಮುಖ್ಯವಾಹಿನಿಗೆ ತರುವಲ್ಲಿ ನಾವುಗಳು ಮುಂದಾಗಬೇಕು ಎಂದರು.
ಹುಬ್ಬಳಿಯಿಂದ ಕಾಶ್ಮೀರವರೆಗೆ ಬೈಕ್ ಸವಾರಿ ಮಾಡಿದ ಏಶಿಯಾ ಮತ್ತು ಇಂಡಿಯಾ ಬುಕ್ ಆಫ್ ರೀಕಾಡ್ರ್ಸ್ -ಯಂಗೆಸ್ಟ್ ಸೋಲೋ ರೈಡರ್ ಪ್ರತಿಕ್ಷಾ ಹರವಿಶೆಟ್ಟರ ಅವರನ್ನು ಸನ್ಮಾನಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕಿ ಮಾತನಾಡಿ ಇಂದು ಮಕ್ಕಳು ದೂರದರ್ಶನ, ಮೊಬೈಲ್‍ಗಳ ದಾಸರಾಗಿ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳಿಂದ ದೂರವಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಇದರತ್ತ ಪಾಲಕರು ಹೆಚ್ಚಿನ ಗಮನಹರಿಸುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!