ಉದಯವಾಹಿನಿ,ಸಿರುಗುಪ್ಪ,: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ರಾಜ್ಯ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿಯಾದ ಶಕ್ತಿ ಯೋಜನೆಯನ್ನು ಸರಕಾರ ಅಸ್ಥಿತ್ವಕ್ಕೆ ಬಂದ 21 ದಿನಗಳಲ್ಲಿ ಚಾಲನೆ ನೀಡಿದ್ದೇವೆ. ಆ.15ರ ಒಳಗೆ ಉಳಿದ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಶಾಸಕ ಬಿ.ಎಂ. ನಾಗರಾಜ ತಿಳಿಸಿದರು.ರವಿವಾರ ನಗರದದ ಬಸ್ ನಿಲ್ದಾಣದಲ್ಲಿ ಆಯೋಜಿತ ಸಮಾರಂಭದಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಕೆಎಸ್ಆರ್ಟಿಸಿಯ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಬಹುದಾದ ಶಕ್ತಿ ಯೋಜನೆಯು ಸಾವಿರಾರು ಕೋಟಿ ರೂ.ಗಳ ಯೋಜನೆಯಾಗಿದೆ. ಇದನ್ನು ಜನರಿಗೆ ತಲುಪಿಸಬೇಕಾಗಿರುವುದರಿಂದ  ಯೋಜನೆಯ ಯಶಸ್ಸಿಗೆ ಅಧಿಕಾರಿಗಳ ಮತ್ತು ಜನರ ಸಹಕಾರವೂ ಮುಖ್ಯವಾಗಿದ್ದು ಶಕ್ತಿ ಯೋಜನೆಯ ಲಾಭವನ್ನು ಮಹಿಳೆಯರಿಗೆ ತಲುಪಬೇಕಿರುವ ಹಿನ್ನೆಲೆಯಲ್ಲಿ ಚಾಲಕರು ಮತ್ತು ನಿರ್ವಾಹಕರು, ಬಸ್ಸುಗಳನ್ನು ನಿಲ್ದಾಣಗಳಲ್ಲಿ ಕಡ್ಡಾಯವಾಗಿ ನಿಲ್ಲಿಸುವ ಮೂಲಕ ಮಹಿಳೆಯರ ಪ್ರಯಾಣಕ್ಕೆ  ಅನುಕೂಲ ಕಲ್ಪಿಸಬೇಕು. ಕರ್ನಾಟಕ ರಾಜ್ಯದಾದ್ಯಂತ ಏಕಕಾಲಕ್ಕೆ ಉಚಿತ ಪ್ರಯಾಣ ಯೋಜನೆ ಜಾರಿ ಮಾಡಿದ್ದು ನುಡಿದಂತೆ ನಡೆದ ಸರ್ಕಾರವೆಂದು ಮತ್ತೊಮ್ಮೆ ರೂಪಿಸಿದ್ದೇವೆ. ಮೂರು ತಿಂಗಳ ಅವಧಿಯಲ್ಲಿ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಬೇಕು ಅದುವರೆಗೂ ಸರ್ಕಾರದ ಯಾವುದಾದರೂ ಅಧಿಕೃತ ಕಾರ್ಡ್ ತೋರಿಸಿ ಪ್ರಯಾಣಿಸಬಹುದೆಂದರು.ಸಿರುಗುಪ್ಪ ಬಸ್ ಘಟಕದ ಕೆ ಎಂ ತಿರುಮಲೇಶ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು, ಗಣ್ಯರ ಆಹ್ವಾನ ಸ್ವಾಗತ ಮಾಡಿ ಸಿರುಗುಪ್ಪ ಘಟಕಕ್ಕೆ ಹೆಚ್ಚಿನ ವಾಹನಗಳ ಅವಶ್ಯಕತೆ ಇದ್ದು ವಾಹನಗಳನ್ನು ಮತ್ತು ಸಿಬ್ಬಂದಿಯನ್ನು ಹೆಚ್ಚಿಸಿ ಕೊಡಬೇಕೆಂದು ಶಾಸಕರಲ್ಲಿ ವಿನಂತಿಸಿದರು ಶಾಸಕರು ಮೂರು ತಿಂಗಳ ಒಳಗಾಗಿ ವಾಹನ ಮತ್ತು ಸಿಬ್ಬಂದಿಗಳ ಹೆಚ್ಚಳ ಮಾಡುವ ಭರವಸೆ ನೀಡಿದರು ಈವೇಳೆ ಘಟಕಕ್ಕೆ  ನೀಡಲಾಗಿರುವ ನೂತನ ಮೂರು ಬಸ್ಸುಗಳಿಗೆ ಪೂಜೆ ಸಲ್ಲಿಸಿರಿಬ್ಬನ್ ಕತ್ತರಿಸಿ, ನೂತನ ಬಸ್ಸುಗಳನ್ನು  ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಮಹಿಳೆಯರಿಗೆ ಹೂ ಮತ್ತು ಸಿಹಿ ನೀಡಿ ಉಚಿತ ಪ್ರಯಾಣಕ್ಕಾಗಿ ಆಹ್ವಾನಿಸಿದರು ಈ ವೇಳೆ ಅನೇಕ ಮಹಿಳೆಯರು ವಾಹನ ಪ್ರವೇಶಿಸಿ ಶೂನ್ಯ ದರದ ಟಿಕೆಟ್ ಪಡೆದರು ಕ್ಷೇತ್ರದ ಶಾಸಕ ಬಿಎನ್ ನಾಗರಾಜ ತಾವು ಕೂಡ ವಾಹನದಲ್ಲಿ ಮಹಿಳೆಯರೊಂದಿಗೆ ಪ್ರಯಾಣಿಸಿದರು ಈ ವೇಳೆ ವಾಹನದಲ್ಲಿ ಅವರಿಗೆ ಸ್ಮಾರ್ಟ್ ಕಾರ್ಡ್ ಪಡೆಯುವ ಬಗ್ಗೆ ಪೂರ್ಣ ವಿವರಣೆ ನೀಡಿದರು .ಈ ಸಂದರ್ಭದಲ್ಲಿ ಮಾಜಿ ಶಾಸಕ ಟಿಎಂ ಚಂದ್ರಶೇಖರ್ ಸ್ವಾಮಿ, ತಹಸಿಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ, ಸಹಕಾರಿ ಕ್ಷೇತ್ರದ ಧುರೀಣ ಚೊಕ್ಕ ಬಸವನಗೌಡ, ಹಿರಿಯ ಮುಖಂಡ ಕೊಡ್ಲೆ ಮಲ್ಲಿಕಾರ್ಜುನ, ಸಿಪಿಐ ಸುಂದ್ರೇಶ, ಇ.ಒ ಮಡಗಿನ ಬಸಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ ಈರಣ್ಣ ತಾ.ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಲಿಂಗರಾಜ ರೆಡ್ಡಿ ಹಾಗೂ ನಗರಸಭೆಯ ಸದಸ್ಯರು, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಚಾಲಕರು, ನಿರ್ವಾಹಕರು, ಸಿಬ್ಬಂದಿ, ಅಭಿಮಾನಿಗಳು, ಕಾರ್ಯಕರ್ತರು ಸೇರಿದಂತೆ ಅನೇಕ ಪ್ರಯಾಣಿಕರು ಇದ್ದರು.

Leave a Reply

Your email address will not be published. Required fields are marked *

error: Content is protected !!