ಉದಯವಾಹಿನಿ ಕುಶಾಲನಗರ:-ರಾಯಚೂರಿನ ಹಿರಿಯ ರಾಜಕಾರಣಿ ಎನ್ ಎಸ್ ಬೋಜ್ ರಾಜ್ ರವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕೊಡಗಿಗೆ ಭಾನುವಾರ ಇಂದು ಆಗಮಿಸಿದರು.
ಇವರನ್ನು ಕೊಡಗು ಮೈಸೂರು ಗಡಿಭಾಗವಾದ ಕೊಪ್ಪ ಕಾವೇರಿ ನದಿಯ ದಡದಲ್ಲಿ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭ ಕುಶಾಲನಗರದ ಗಡಿಭಾಗದ ಕಾವೇರಿ ನದಿ ತಟದಲ್ಲಿರುವ ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾತನಾಡಿದ ಇವರು ಯಾವುದೋ ಒಂದು ಕಾರಣಕ್ಕೆ ಮುಖ್ಯ ಮಂತ್ರಿಗಳು ನನಗೆ ಕೊಡಗು ಜಿಲ್ಲಾ ಉಸ್ತುವಾರಿ ಸ್ಥಾನವನ್ನು ನೀಡಿದ್ದಾರೆ ಕೊಡಗಿಗೆ ಬರುವುದು ನನ್ನ ಅದೃಷ್ಟ ಎಂದು ತಿಳಿದಿದ್ದೇನೆ ಕೊಡಗಿನ ಜನ ಪ್ರಭುದ್ಧರು ಬುದ್ಧಿವಂತರು ಇಲ್ಲಿ ಸೇವೆ ಸಲ್ಲಿಸುವುದು ನನ್ನ ಭಾಗ್ಯ ಎಂದರಲ್ಲದೇ ಇಬ್ಬರು ಶಾಸಕರ ಜೊತೆಗೂಡಿ ಇನ್ನು ಉತ್ತಮವಾದ ಕೆಲಸವನ್ನು ಮಾಡಲು ಕೊಡಗಿಗೆ ಬಂದಿದ್ದೇನೆ ಎಂದರು ಈ ಸಂದರ್ಭ ಪುರಸಭೆಯ ಸದಸ್ಯರಾದ ಪ್ರಮೋದ್ ಮುತ್ತಪ್ಪ ಹೈಕೋರ್ಟ್ ವಕೀಲ ಚಂದ್ರಮೌಳಿ ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್ ಕಾರ್ಯಕರ್ತರಾದ ಮುಸ್ತಫ ಹಿರಿಯ ರಾಜಕಾರಣಿಗಳು ಕಾರ್ಯಕರ್ತರು ಸಾರ್ವಜನಿಕರು ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!