ಉದಯವಾಹಿನಿ, ಚಿತ್ರದುರ್ಗ: ಸಿರಿಗೆರೆಯ ತರಳಬಾಳು ಬೃಹನ್ಮಠದಿಂದ ಆಯೋಜಿಸಿರುವ ‘ತರಳಬಾಳು ಹುಣ್ಣಿಮೆ’ ಮಹೋತ್ಸವ ಫೆ.4ರಿಂದ 12ರವರೆಗೆ ತಾಲ್ಲೂಕಿನ ಭರಮಸಾಗರದಲ್ಲಿ ನಡೆಯಲಿದೆ.
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭಕ್ಕೆ 200 ಎಕರೆ ಪ್ರದೇಶದಲ್ಲಿ ನೂತನ ಮಹಾಮಂಟಪ, ಸಭಾವೇದಿಕೆ, ಪುಸ್ತಕ ಮಾರಾಟ ಮಳಿಗೆ, ಕೃಷಿ ಪ್ರದರ್ಶನ ಮಳಿಗೆ, ಕ್ರೀಡಾ ಅಂಕಣಗಳು ಹಾಗೂ ಕುಸ್ತಿ ಅಖಾಡ ಸಿದ್ದಗೊಂಡಿದೆ.

9 ದಿನ ನಡೆಯುವ ಮಹೋತ್ಸವದಲ್ಲಿ ಮಠಾಧೀಶರು ರಾಜಕಾರಣಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ.
ಫೆ.4ರಂದು ಸಂಜೆ 4.30ಕ್ಕೆ ಭರಮಸಾಗರದ ಭರಮಣ್ಯ ನಾಯಕನ ಕೆರೆಯಲ್ಲಿ ತಪ್ಪೋತ್ಸವ ನಡೆಯಲಿದೆ. ಆ ಮೂಲಕ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.ಫೆ.12ರಂದು ಸಮಾರೋಪ ಸಮಾರಂಭ ನಿಗದಿಯಾಗಿದೆ. ಅಂದು ಶ್ರೀಗಳ ಬೆಳ್ಳಿಪಲ್ಲಕ್ಕಿ ಉತ್ಸವ, ಸದ್ದರ್ಮ ಸಿಂಹಾಸನಾರೋಹಣ ಸಮಾರಂಭ ಜರುಗಲಿವೆ. ಉತ್ಸವದ ಅಂಗವಾಗಿ ಶ್ರೀಗಳು ಹುತಾತ್ಮ ವೀರಯೋಧರ ಕುಟುಂಬಗಳ ಸದಸ್ಯರಿಗೆ ತಲಾ 1 ಲಕ್ಷ ಆರ್ಥಿಕ ನೆರವು ನೀಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!