ಉದಯವಾಹಿನಿ, ಮಲೇಬೆನ್ನೂರು: ಸೂಫಿ ಸಂತ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದಿ ಉರುಸ್‌ಗೆ ಪಟ್ಟಣ ಸಜ್ಜಾಗಿದೆ. ಫೆ.5ಕ್ಕೆ ಗಂಧ ಮೆರವಣಿಗೆ (ಸಂಧಲ್) ಹಾಗೂ ಫೆ.6ಕ್ಕೆ ಉರುಸ್ ನಡೆಯಲಿವೆ.
ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಉರುಸ್ ಅಂಗವಾಗಿ ದರ್ಗಾ ಷರೀಫ್‌ನಿಂದ ಆರಂಭವಾಗುವ ಮೆರವಣಿಗೆ ಪಟ್ಟಣದ ರಾಜಬೀದಿಯಲ್ಲಿ ಸಾಗಲಿದೆ.
ಮುಸ್ಲಿಂ ಧರ್ಮಗುರುಗಳು ಹಿಂದೂ ಧರ್ಮೀಯರ ಮನೆಯಿಂದ ಶ್ರೀಗಂಧ ಪಡೆದು, ಹಿಂದೂ ಧರ್ಮ ಗುರುಗಳ ಜತೆ ಗಂಧದ ಮೆರವಣಿಗೆ ನಡೆಸುವುದು ಸಂಪ್ರದಾಯ.
ಗಂಧದ ಧೂಪದ ಸುವಾಸನೆ ನಡುವೆ ಬಾಜಾ ಭಜಂತ್ರಿ, ಫಕೀರರ ಪವಾಡ,
ಖಂಜರ ನಿನಾದ, ವಾದ್ಯವೃಂದ, ಗೀತ ಗಾಯನ, ದಫ್ಟ್, ಖುರಾನ್ ಪಠಣೆಯೊಟ್ಟಿಗೆ ಸಕ್ಕರೆ ನಿವೇದಿಸಿ ಭಕ್ತಿ ಸಮರ್ಪಿಸಿ ಭಾವೈಕೈ ಸಂದೇಶ ಸಾರಲಾಗುತ್ತದೆ.
ಪ್ರಯುಕ್ತ ಪಟ್ಟಣದಲ್ಲಿ ಉರುಸ್ ಶುಭಾಶಯ ಕೋರುವ ಪ್ರಕ್ಸ್, ಬ್ಯಾನರ್, ಬಂಟಿಂಗ್ಸ್, ದೀಪಾಲಂಕಾರ ಜನಮನ ಸೆಳೆಯುತ್ತಿದೆ. ಬಡಾವಣೆಗಳು ವಾಹನ, ಜನರಿಂದ ತುಂಬಿವೆ. ಭೋಜನ ವ್ಯವಸ್ಥೆ ಭರದಿಂದ ಸಾಗಿದೆ.
ದರ್ಗಾ ರಸ್ತೆ, ಷರೀಫಿಗೆ ಝಗಮಗಿಸುವ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ದರ್ಗಾ ಮೈದಾನದಲ್ಲಿ ಬಗೆಬಗೆಯ ಮನೋರಂಜನಾ ಬೈಕ್, ಕುದುರೆ, ವಾಹನ ಸವಾರಿ, ತಿರುಗು ಯಂತ್ರ, ಕುಣಿತ, ಜಿಗಿತ, ತಿರುಗಣಿ ಆಟ ಇನ್ನಿತರ ವಿವಿಧ ಬಗೆಯ ಆಕರ್ಷಕ ಆಟಗಳ ವ್ಯವಸ್ಥೆ ಇದೆ. ಆಲಂಕಾರಿಕ ವಸ್ತು,
ಪುಸ್ತಕ, ಗಾಜಿನ ವಸ್ತು, ಬಟ್ಟೆ ಆಟಿಕೆ ಸಾಮಾನು, ಬಳೆ, ವಿದ್ಯುನ್ಮಾನ ವಸ್ತುಗಳ ಮಾರಾಟ ಮಳಿಗೆಗಳು ತಲೆ ಎತ್ತಿವೆ.
