ಉದಯವಾಹಿನಿ, ಬ್ರಹ್ಮಾವರ: ಉಡುಪಿ ಗ್ರಾಮಾಂತರ ಭಾಗದ ಬ್ರಹ್ಮಾವರ- ಹೆಬ್ರಿ ರಾಜ್ಯ ಹೆದ್ದಾರಿಯ ಕರ್ಜೆ ಗ್ರಾಮದ ಅಪ್ಲಿಕಟ್ಟೆ ಸೇತುವೆಯಿಂದ ಹೊಸೂರು ಶಾಲೆವರೆಗಿನ ಚತುಷ್ಪಥ ರಸ್ತೆ ಕಾಮಗಾರಿಗೆ ಶುಕ್ರವಾರ ಶಾಸಕ ಯಶ್‌ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು. ಅವರು ಮಾತನಾಡಿ, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ಎಸ್.ಎಚ್.ಡಿ.ಪಿ. ಯೋಜನೆಯಡಿ ₹10 ಕೋಟಿ ಅನುದಾನದ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಉಡುಪಿ ಕ್ಷೇತ್ರದ ಗಡಿಭಾಗ ಕಳ್ಳರುವರೆಗೂ ಚತುಷ್ಪಥ ರಸ್ತೆ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ ಕುಲಾಲ, ಪ್ರಮುಖರಾದ ಸುರೇಶ ಶೆಟ್ಟಿ ತಡಾಲು, ಧನಂಜಯ ಅಮೀನ್, ರಮೇಶ ಭಟ್ ಕರ್ಜೆ, ಪ್ರತಾಪ ಹೆಗ್ಡೆ, ಮಾರಾಳಿ, ರಾಜೇಶ ಶೆಟ್ಟಿ ಬಿರ್ತಿ. ಆದರ್ಶ ಶೆಟ್ಟಿ ಕೆಂಜೂರು, ನರಸಿಂಹ ನಾಯ್ಕ, ದಿನೇಶ ಕೆಂಜೂರು, ಹರೀಶ ಶೆಟ್ಟಿ ಚೇರ್ಕಾಡಿ, ಕಮಲಾಕ್ಷ ಹೆಬ್ಬಾರ್, ಮನೋಜ ಶೆಟ್ಟಿ ಸಂತೆಕಟ್ಟೆ, ಕಿಟ್ಟಪ್ಪ ಅಮೀನ್, ನವೀನ ಪುತ್ರನ್ ಕರ್ಜೆ, ಕಳ್ಳೂರು ಗ್ರಾ.ಪಂ. ಅಧ್ಯಕ್ಷ ನವೀನ ಪೂಜಾರಿ, ಕೊಕ್ಕರ್ಣೆ ಗ್ರಾ.ಪಂ. ಅಧ್ಯಕ್ಷ ಜಯಂತ ಪೂಜಾರಿ, ಗುತ್ತಿಗೆದಾರ
ದೇವಿಪ್ರಸಾದ ಶೆಟ್ಟಿ, ಸ್ಥಳೀಯರಾದ ಸುಧಾ ಭಟ್, ಕೃಷ್ಣ ಪೂಜಾರಿ, ಬಾಲಕೃಷ್ಣ ಪೂಜಾರಿ, ಅಮಿತ ಶೆಟ್ಟಿ, ಸುಧಾಕರ ಸುವರ್ಣ, ಸತೀಶ ನಾಯಕ್, ಗ್ರಾಮಸ್ತರು ಭಾಗವಹಿಸಿದ್ದರು.
