ಉದಯವಾಹಿನಿ , ತೈಪೆ, : ತೈವಾನ್ನಲ್ಲಿ ವ್ಯಕ್ತಿಯೊಬ್ಬ ತೈಪೆ ರೈಲು ನಿಲ್ದಾಣದ ಬಳಿ ಜನರ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಶಂಕಿತನು ಮೊದಲು ತೈಪೆಯ ಮುಖ್ಯ ರೈಲು ನಿಲ್ದಾಣದ ಬಳಿ ಸ್ಮೋಕ್ ಬಾಂಬ್ ಎಸೆದಿದ್ದ.ಇದು ಪ್ರಯಾಣಿಕರಲ್ಲಿ ಭಯವನ್ನು ಉಂಟುಮಾಡಿತು.
ಜನರು ಆ ಪ್ರದೇಶದಿಂದ ಓಡಿ ಹೋಗಲು ಮುಂದಾದಾಗ ಆತ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಕೂಡಲೇ ಮಾಹಿತಿ ಪಡೆದ ಪೊಲೀಸರು ಶಂಕಿತನನ್ನು ಪತ್ತೆಹಚ್ಚಲು ಪೊಲೀಸರು ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.ಆ ವ್ಯಕ್ತಿ ಕಟ್ಟಡದ ಮೇಲಿನ ಮಹಡಿಯಿಂದ ಕೆಳಗೆ ಬಿದ್ದಿದ್ದು ಗಂಭೀರ ಗಾಯಗಳಾಗಿತ್ತು, ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆತನ ಒಬ್ಬನೇ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದು, ಇಲ್ಲಿಯವರೆಗೆ ಯಾವ ಸಹಚರನೂ ಪತ್ತೆಯಾಗಿಲ್ಲ. ದಾಳಿ ಮಾತ್ರ ಭಯಾನಕವಾಗಿತ್ತು.
