ಉದಯವಾಹಿನಿ , ರಶ್ಮಿಕಾ ಮಂದಣ್ಣ ಮದ್ವೆ ವಿಚಾರದಲ್ಲಿ ಸಾಕಷ್ಟು ಬಾರಿ ನಿಶ್ಚಿತಾರ್ಥ, ಮದ್ವೆ ಆಗಿ ಹೋಗಿದೆ. ಜಾಲತಾಣದಲ್ಲಿ ಅವರ ಫೋಟೋಗಳು, ವಿಡಿಯೋಗಳು ಇದೇ ಮೊದಲಲ್ಲ ಹಲವಾರು ಬಾರಿ ಹರಿದಾಡುತ್ತಲೇ ಇವೆ. ಆದ್ರೆ ಈ ಬಾರಿ ಮದ್ವೆ ಫೋಟೋ ಜೊತೆಗೆ ಸೆಲೆಬ್ರಿಟಿಗಳು ಸಹ ಪೋಸ್‌ಕೊಟ್ಟು ನಿಂತಿರೋದು ಮೊದಲ ಸಲ ನೋಡಿದಾಗ ರಶ್ಮಿಕಾ ಫ್ಯಾನ್ಸ್ ಶಾಕ್ ಆಗಿದ್ದಾರೆ. ಫೋಟೋಗಳನ್ನ ಒಮ್ಮೆ ಬಿಟ್ಟು ಮತ್ತೊಮ್ಮೆ ನೋಡಿದಾಗಲೇ ಅದರ ಅಸಲಿಯತ್ತು ತಿಳಿದಿದೆ. ಇದು ರಿಯಲ್ ಅಲ್ಲ, ಎಐ ತಂತ್ರಜ್ಞಾನದ ಮೂಲಕ ಫೋಟೋಗಳನ್ನ ಎಡಿಟ್ ಮಾಡಲಾಗಿದೆ ಅನ್ನೋದು.
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಹರಿದಾಡ್ತಿರುವ ಹಿನ್ನೆಲೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದ್ವೆ ಆಗಿಯೇ ಬಿಟ್ಟರಾ ಎಂದು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗ್ತಿವೆ. ಯಾಕಂದ್ರೆ ಇದೇ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಗುಟ್ಟಾಗಿ ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮದ್ವೆಯನ್ನೂ ಕೂಡಾ ರಹಸ್ಯವಾಗಿ ಮಾಡಿಕೊಂಡಿದ್ದಾರಾ ಎನ್ನುವ ಚರ್ಚೆಗಳು ಜೋರಾಗಿಯೇ ನಡೆದಿದೆ.
