ಉದಯವಾಹಿನಿ,ಚಿಂಚೋಳಿ: ಪಟ್ಟಣದ ಚಂದಾಪೂರ ತಾಂಡಾಕ್ಕೆ ಹೋಗುವ ಮಾರ್ಗಮಧ್ಯ ಹಳೆ ಪೋಸ್ಟ್ ಆಫೀಸ್ ಹತ್ತಿರ ತೆಗ್ಗುಗುಂಡಿಗಳು ಬಿದ್ದು ಚರಂಡಿಯ ಹೊಲಸ್ಸು ನೀರು ರಸ್ತೆ ಮೇಲೆ ಸಾಗುತ್ತವೆ ಹಾಗೂ ಅದೆ ಸ್ಥಳದಲ್ಲೇ ಕುಡಿಯುವ ನೀರಿನ ನಳಗಳುವಿದ್ದು ಕುಡಿಯಲು ನೀರು ತೆಗೆದುಕೊಂಡು ಹೋಗುವುದು ಸಹಜ ಆದರೆ ಸಾರ್ವಜನಿಕರು ಸಂಕ್ರಾಂಮೀಕ ರೋಗ ಹೊರಡುವ ಭೀತಿಯಲ್ಲಿ ಜನರು ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು “ಜೂ.4ರಂದು ಉದಯವಾಹಿನಿ ಪತ್ರಿಕೆಯಲ್ಲಿ ವರದಿ” ಬಿತ್ತರಿಸಿದ ಮೇಲೆ ಪುರಸಭೆ ಅಧಿಕಾರಿ ಹಾಗೂ ಸದಸ್ಯರು ಎಚ್ಚೇತುಕೊಂಡು ತಾತ್ಕಾಲಿಕವಾಗಿ ರಸ್ತೆಯ ಗುಂಡಿಗಳು ಮರುಬು ಹಾಕಿ ದುರಸ್ತಿಗೊಳಿದ್ದು ಸಾರ್ವಜನಿಕರು ಉದಯವಾಹಿನಿ ಪತ್ರಿಕೆಗೆ ಧನ್ಯವಾದಗಳು ಸಲ್ಲಿ

ಸಿದ್ದಾರೆ.
ಪಟ್ಟಣದ್ಯಂತ ಅನೇಕ ಸಮಸ್ಯೆಗಳಿದ್ದು ಉದಯವಾಹಿನಿ ಪತ್ರಿಕೆಯು ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದು ಬಡವರ ದಿನದಲಿತರ ಕಾರ್ಮಿಕರ ರೈತಾಪಿ ವರ್ಗದವರ ಪರವಾಗಿ ಒಳ್ಳೆಯ ಸುದ್ದಿಗಳು ಬಿತ್ತರಿಸುತ್ತಿರುವುದರಿಂದ ಕ್ಷೇತ್ರದ ಅನೇಕ ಸಮಸ್ಯೆಗಳು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳು ಈಡೇರಿಸುತ್ತಿದೆ ಉದಯವಾಹಿನಿ ದಿನಪತ್ರಿಕೆಯು ಉನ್ನತಮಟ್ಟಕ್ಕೆ ಬೆಳೆಯಲಿ ಎಂದು ಎಎಪಿ ಮುಖಂಡ ಗೌತಮ ಮೋರೆ ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಪತ್ರಕರ್ತರೊಂದಿಗೆ ಮಾತನಾಡಿ ಉದಯವಾಹಿನಿ,ದಿನಪತ್ರಿಕೆಯಲ್ಲಿ ಜೂ.4ರಂದು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಸಾರ್ವಜನಿಕರು ಎಂಬ ಸುದ್ದಿ ಭೀತ್ತರಿಸಿ ನಂತರ ನಮಗೆ ಗೋತ್ತಾಯಿತು ತಕ್ಷಣ ರಸ್ತೆಗೆ ತಾತ್ಕಾಲಿಕವಾಗಿ ಉತ್ತಮ ಮರುಬ್ ಹಾಕಿ ತೆಗ್ಗುಗುಂಡಿಗಳು ಮುಚ್ಚಲಾಗಿದೆ ಆದಷ್ಟೂ ಶೀಘ್ರದಲ್ಲೇ ಕ್ರೀಯಾಯೋಜನೆ ಸಿದ್ದಪಡಿಸಿಕೊಂಡು ಆ ರಸ್ತೆಗೆ ಸಿಸಿರಸ್ತೆ ಮಾಡಲಾಗುವುದು ಎಂದು ಹೇಳಿದರು.
