ಉದಯವಾಹಿನಿ, ಬೆಂಗಳೂರು : ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ಕಾಮಿನಿ ಎ.ರಾವ್ ಅವರ ಎರಡನೇ ಆಸ್ಪತ್ರೆಯ ಶಾಖೆಯನ್ನು ಜಯನಗರದಲ್ಲಿ ಲೋಕಾರ್ಪಣೆಗೊಂಡಿದೆ.
ಮಕ್ಕಳಾಗದ ಸಹಸ್ರಾರು ಮಹಿಳೆಯರಿಗೆ ತಾಯಿ ಆಗುವ ಅವಕಾಶ ಕಲ್ಪಿಸಿ ಕೊಟ್ಟ ಡಾ.ಕಾಮಿನಿರಾವ್ ಅವರು ಶಿವಾನಂದ ಸರ್ಕಲ್ ನಲ್ಲಿ ಮೊದಲಬಾರಿಗೆ ಬಂಜೆತನ ನಿವಾರಣಾ ಆಸ್ಪತ್ರೆಯನ್ನು ಆರಂಭಿಸಿ ಲಕ್ಷಾಂತರ ಮಹಿಳೆಯರ ಮಕ್ಕಳಾಗದ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಈಗ ಜಯನಗರದಲ್ಲಿ ಮತ್ತೊಂದು ಶಾಖೆಯನ್ನು ಆರಂಭಿಸಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯನಟಿ ಮಾಲಾಶ್ರೀ ಡಾ.ಕಾಮಿನಿರಾವ್ ಆಸ್ಪತ್ರೆಯ ಜಯನಗರದ ನೂತನ ಶಾಖೆಯನ್ನು ಉದ್ಘಾಟನೆ ಗೊಳಿಸಿದರು. ಇದೇ ಸಂದರ್ಭದಲ್ಲಿ ನಟಿ ಮಾಲಾಶ್ರೀ ಅವರನ್ನು ಕಾಮಿನಿರಾವ್ ಆಸ್ಪತ್ರೆಯ ಪ್ರಚಾರ ರಾಯಭಾರಿ ಎಂದು ಘೋಷಣೆ ಮಾಡಲಾಯಿತು.
ಉದ್ಘಾಟನೆಯ ಬಳಿಕ ಮಾತನಾಡಿದ ಮಾಲಾಶ್ರೀ, ನಾನು ತುಂಬಾ ಇಷ್ಟಪಟ್ಟು ಇವರ ಜತೆ ಕೈಜೋಡಿಸಿದ್ದೇನೆ. ಹೆಣ್ಣನ್ನು ದೇವತೆ ಅಂತಾರೆ. ಒಬ್ಬ ತಾಯಿಯಾಗುವುದು ಆಕೆಗೆ ಆ ದೇವರು ಕೊಟ್ಟ ವರ.ಮಕ್ಕಳಾಗದೆ ಇರುವವರಿಗೆ ಸಹಾಯ ಮಾಡುತ್ತಿರುವ ಡಾ.ಕಾಮಿನಿರಾವ್ ಅವರ ಕೆಲಸ ಶ್ಲಾಘನೀಯ.ಹೆಣ್ಣು ತಾಯಿ, ಮಗಳಾಗಿ ಆ ಕುಟುಂಬದ ಶಕ್ತಿಯಾಗ್ತಾಳೆ. ಇಂದು ಜಯನಗರದಲ್ಲಿ ಎರಡನೇ ಶಾಖೆ ಆರಂಭವಾಗುತ್ತಿರುವುದು ಖುಷಿ. ಈ ಭಾಗದ ಹೆಣ್ಣುಮಕ್ಕಳಿಗೆ ಅನುಕೂಲವಾಗುತ್ತದೆ. ಪ್ರತಿ ಹೆಣ್ಣುಮಕ್ಕಳು ನೇರವಾಗಿ ಇಲ್ಲಿಗೆ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು ಎಂದರು.
ಡಾ. ಕಾಮಿನಿರಾವ್ ಮಾತನಾಡಿ, ನೋಡಿದಂತೆ ಶೇ.೪೦ರಷ್ಟು ಹೆಣ್ಣುಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.ಕೆಲವರಿಗೆ ಹೆರಿಗೆಯಾದ ನಂತರವು ಸಮಸ್ಯೆ ಎದುರಾಗುತ್ತದೆ. ಅಂಥವರ ತೊಂದರೆಗಳನ್ನೂ ನಾವು ನಿವಾರಿಸಿದ್ದೇವೆ. ಈಗ ನನ್ನ ಮಗಳು ಡಾ.ವೈಷ್ಣವಿ ರಾವ್ ಕೂಡ ಜತೆಗಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!