ಉದಯವಾಹಿನಿ, ಮಂಗಳೂರು: ‘ಒಬ್ಬರ ಮೇಲೊಬ್ಬರು ಕೆಸರು ಎರಚುವುದು, ಆಪಾದನೆ ಮಾಡುವುದು, ಪತ್ರಿಕಾ ಗೋಷ್ಠಿ ಕರೆದು ಬೈಯುವುನ್ನು ಬಿಜೆಪಿಯಲ್ಲಿ ಕಾಣಬಹುದು. ಅಂತಹ ಕೆಟ್ಟ ಪರಿಸ್ಥಿತಿಗೆ ನಾವು ತಲುಪಿಲ್ಲ. ಬಿಜೆಪಿಯವರಂತೆ ನಮ್ಮ ಪಕ್ಷದಲ್ಲಿ ಅನಾರೋಗ್ಯಕರ ಪೈಪೋಟಿ ಇಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಮ್ಮ ಪಕ್ಷದಲ್ಲೂ ಆಂತರಿಕ ವಿಚಾರಗಳು ಇದ್ದೇ ಇರುತ್ತವೆ. ನಮ್ಮಲ್ಲಿ ಕೆಲವರು ಅವರದೇ ಆದ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಇತಿಮಿತಿಯಲ್ಲಿ ಇರಬೇಕು. ನಾಯಕರನ್ನು ಭೇಟಿಯಾಗಲು ಯಾವ ನಿರ್ಬಂಧವೂ ಇಲ್ಲ’ ಎಂದರು.
‘ದಲಿತರ ಸಮ್ಮೇಳನ ನಡೆಸುವುದು ಬೇಡ ಎಂದು ಯಾರೂ ಹೇಳಿಲ್ಲ.ಈ ಹಿಂದೆಯೂ ದಾವಣಗೆರೆಯಲ್ಲಿ ದೊಡ್ಡ ಸಮಾವೇಶ ಮಾಡಿದ್ದೆವು.
ಅದನ್ನು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಚರ್ಚೆ ಆಗುತ್ತಿದೆ ಅಷ್ಟೆ. ಕಾಂಗ್ರೆಸ್ ಯಾವತ್ತೂ ಸಾಮಾಜಿಕ ನ್ಯಾಯದ ಪರ, ಬಡವರು ಶೋಷಿತರ ಪರ ನಿಂತ ಪಕ್ಷ. ಇಂತಹ ಜನಾಂಗಗಳ ಪ್ರಮುಖ ನಾಯಕರನ್ನು ಹೊಂದಿರುವ ಪಕ್ಷ ಬಹಳ ದೊಡ್ಡ ಕಾರ್ಯಕ್ರಮ ಮಾಡುವ ಒಳ್ಳೆಯ ಉದ್ದೇಶವಿದೆ. ಅದು ಯಾವ ರೂಪದಲ್ಲಿ ಆಗಬೇಕು ಎಂದು ತೀರ್ಮಾನ ಆಗಬೇಕಿದೆ ಅಷ್ಟೇ’ ಎಂದರು.

Leave a Reply

Your email address will not be published. Required fields are marked *

error: Content is protected !!