ಉದಯವಾಹಿನಿ, ಹಾಸನ: ಹಲವು ವಿಭಾಗದಲ್ಲಿ ನಿವೃತ್ತ ಯೋಧರು ದೇಶಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಅವರ ಹಲವಾರು ಬೇಡಿಕೆ ಬಗ್ಗೆ ಕೇಂದ್ರದ ಗೃಹ ಸಚಿವರು, ರಕ್ಷಣಾ ಸಚಿವರೊಂದಿಗೆ ಮಾತನಾಡಿ ಅಗತ್ಯ ಕ್ರಮಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದ ಹೊರವಲಯದ ಕೆಂಚಟ್ನಹಳ್ಳಿಯಲ್ಲಿ ನಿವೃತ್ತ ಅರೆಸೇನಾ ಪಡೆಯ ಯೋಧರ ಭವನ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಸಂಘಕ್ಕೆ ಅಗತ್ಯವಾದ ಕಟ್ಟಡ ನಿರ್ಮಿಸಿದ್ದು ಉತ್ತಮ ಬೆಳವಣಿಗೆಯಾಗಿದೆ. ನಿವೃತ್ತ ಯೋಧರಿಗೆ ಸೂಕ್ತ ಸೌಲಭ್ಯ ಒದಗಿಸಲು ಭವನ ನಿರ್ಮಿಸಿದ್ದು ಶ್ಲಾಘನೀಯ ಅರೇಸೇನಾ ಯೋಧರ ಕರ್ತವ್ಯ ಹಾಗೂ ಗಡಿಯಲ್ಲಿನ ಅಕ್ರಮ ಚಟುವಟಿಕೆ, ನಕ್ಸಲ್ ಹಾವಳಿಯಲ್ಲಿ ಕೆಲಸ ಕಷ್ಟಕರವಾದದ್ದು ಅವರ ಸೇವೆಯನ್ನು ಸರ್ಕಾರಗಳು ಮರೆಯಬಾರದು. ಯೋಧರ ಕುಟುಂಬದೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ ಎಂದರು.
ಅರೆಸೇನಾ ಯೋಧರ ವರ್ಗಾವಣೆ ವಿಚಾರದಲ್ಲಿ ನನಗೆ ಮನವಿ ಕೊಟ್ಟಾಗ. ಇದನ್ನು ಕಾರ್ಯಗತ ಮಾಡಲು ಕಷ್ಟಕರವಾಗಿತ್ತು. ನಿಮ್ಮ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು. ಎಚ್.ಡಿ. ದೇವೇಗೌಡರ ಸಹಾಯದೊಂದಿಗೆ ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಆರೋಗ್ಯ ಸಮಸ್ಯೆ ಇದ್ದರೂ ನಿಮ್ಮ ಪ್ರೀತಿಯ ಆಹ್ವಾನಕ್ಕೆ ಮಣಿದು ಬಂದಿದ್ದೇನೆ. ನಿಮ್ಮ ಜೀವ ಉಳಿಸಿಕೊಂಡು ದೇಶದ ರಕ್ಷಣೆಗೆ ನೀವು ಸಲ್ಲಿಸಿರುವ ಸೇವೆಗೆ ಸೆಲ್ಯೂಟ್ ಮಾಡಲು ಬಂದಿದ್ದೇನೆ ಎಂದರು. ನಾನು ಹೆಚ್ಚು ಅವಧಿ ಮುಖ್ಯಮಂತ್ರಿ ಆಗಿದ್ದರೆ ರಾಜ್ಯಕ್ಕೆ ಮತ್ತನ್ನು ಕಾರ್ಯಕ್ರಮ ರೂಪಿಸಲಾಗುತ್ತಿತ್ತು. ಆದರೆ ದುರಾದೃಷ್ಟ ಹಾಗಾಗಲಿಲ್ಲ.
