ಉದಯವಾಹಿನಿ, ಬೆಂಗಳೂರು: ದ್ವಿ-ಚಕ್ರ ವಾಹನ ಮತ್ತು ಮನೆ ಕಳವು ಮಾಡುತ್ತಿದ್ದ ಹಳೆ ಕಳ್ಳನನ್ನು ಬಂಧಿಸಿರುವ ಬೇಗೂರು ಪೊಲೀಸರು ೧೪.೨೬ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ. ಬೊಮ್ಮನಹಳ್ಳಿಯ ಹೊಂಗಸಂದ್ರದ ಮೂರ್ತಿ(೨೭)ಬಂಧಿತ ಹಳೆ ಕಳ್ಳನಾಗಿದ್ದು, ಆತನಿಂದ ೧೪.೨೬ ಲಕ್ಷ ಮೌಲ್ಯದ ೧೭೯ ಗ್ರಾಂ ಚಿನ್ನಾಭರಣ, ದ್ವಿ-ಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದರು.

ಬೇಗೂರಿನ ದೇವರಚಿಕ್ಕಹಳ್ಳಿಯ ನ್ಯಾನಪ್ಪನಹಳ್ಳಿಯ ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ದ್ವಿ-ಚಕ್ರ ವಾಹನವನ್ನು ಕಳವು ಮಾಡಿದ ಪ್ರಕರಣ ದಾಖಲಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಖಚಿತ ಮಾಹಿತಿಯನ್ನು ಕಲೆ ಹಾಕಿ, ಬೇಗೂರಿನ ಕೊಡಿಚಿಕ್ಕನಹಳ್ಳಿ ಬಳಿ ಕಳುವಾಗಿದ್ದ ದ್ವಿ-ಚಕ್ರ ವಾಹನ ಸಮೇತ ವಶಕ್ಕೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು. ಆರೋಪಿಯನ್ನು ಸುದೀರ್ಘ ವಿಚಾರಣೆಗೊಳಪಡಿಸಲಾಗಿ, ದ್ವಿ-ಚಕ್ರ ವಾಹನ ಕಳವು ಪ್ರಕರಣವಲ್ಲದೆ ಬೇಗೂರು ಪೊಲೀಸ್ ಠಾಣಾ ಸರಹದ್ದಿನ ಎರಡು ಮನೆಗಳಲ್ಲಿ ಹಾಗೂ ಕೆ.ಆರ್ ಪುರ ಪೊಲೀಸ್ ಠಾಣಾ ಸರಹದ್ದಿನ ಒಂದು ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಕಳವು ಮಾಡಿದ ಚಿನ್ನಾಭರಣಗಳನ್ನು ಮಲ್ಲೆಶ್ವರಂ, ಬಸವನಗುಡಿ ಹಾಗೂ ಕೆಂಗೇರಿಯ ಗೋಲ್ಡ್ ಕಂಪನಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಅದನ್ನು ಆಧರಿಸಿ ಕೆಂಗೇರಿಯ ಗೋಲ್ಡ್ ಕಂಪನಿಯಿಂದ ೧೦೦ ಗ್ರಾಂ ಬಸವನಗುಡಿಯ ಗೋಲ್ಡ್ ಕಂಪನಿಯಿಂದ ೩೪ ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳ ಲಾಯಿತು. ಸೇರಿ ಇತರೆಡೆಗಳಲ್ಲಿಟ್ಟಿಧದ್ದ ೧೭೯ ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದರು. ಆರೋಪಿಯ ಬಂಧನದಿಂದ ಬೇಗೂರಿನ ಮನೆಗಳವು,ವಾಹನಗಳವು, ಕೆ.ಆರ್ ಪುರಂ ಮನೆ ಕಳವು ಪ್ರಕರಣ ಸೇರಿ ೪ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದರು. ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತೆ ಸಾರಾ ಫಾತಿಮಾ ಮಾರ್ಗದರ್ಶನದಲ್ಲ ಬೇಗೂರು ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಪಿ.ಎಸ್ ಮತ್ತವರ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

error: Content is protected !!