ಉದಯವಾಹಿನಿ, ಬೆಂಗಳೂರು: ಐಸಿಎಐ ಬೆಂಗಳೂರು ಶಾಖೆಯ ನೂತನ ಅಧ್ಯಕ್ಷರಾಗಿ ಸಿಎ.ಮಂಜುನಾಥ್ ಎಂ. ಹಳ್ಳೂರ್ ಹಾಗೂ ಉಪಾಧ್ಯಕ್ಷ ರಾಗಿ ಸಿಎ.ಕವಿತಾ ಪರಮೇಶ ಆಯ್ಕೆಯಾಗಿದ್ದಾರೆ.
ಭಾರತೀಯ ಚಾರ್ಟಡ್ ಅಕೌಂಟೆಂಟ್ಸ್ ಸಂಸ್ಥೆಯ ಬೆಂಗಳೂರು ಶಾಖೆಯ ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳ ಚುನಾವಣೆ ಇತ್ತೀಚೆಗೆ ನಡೆದಿದ್ದು ೫೬ನೇ ಅಧ್ಯಕ್ಷರಾಗಿ ಸಿಎ.ಮಂಜುನಾಥ್ ಎಂ.ಹಳ್ಳೂರ್ ಹಾಗೂ ಉಪಾಧ್ಯಕ್ಷರಾಗಿ ಸಿಎ.ಕವಿತಾ ಪರಮೇಶ ಆಯ್ಕೆಯಾಗಿದ್ದಾರೆ. ಜತೆಗೆ ಕಾರ್ಯದರ್ಶಿಯಾಗಿ ಸಿಎ. ತುಪ್ಪದ್ ವಿರುಪಾಕ್ಷಾ ಮುಪ್ಪಣ್ಣ, ಖಜಾಂಜಿ ಯಾಗಿ ಸಿಎ.ಶ್ರೀಪಾದ್ ಎಚ್.ನಾರಾಯಣ್, ಸಿಕಾಸಾ ಅಧ್ಯಕ್ಷರಾಗಿ ಸಿಎ.ನಿಶ್ಚಲ್ ಆರ್.ಬದ್ರಿನಾಥ್, ವ್ಯವಸ್ಥಾಪಕ ಸಮಿತಿ ಸದಸ್ಯರಾಗಿ ಸಿಎ.ಚಂದ್ರ ಪ್ರಕಾಶ್ ಜೈನ್, ಸಿಎ. ವಿನೋದ್ ಗಾರ್ಗ್, ಸಿಎ.ರಾಘವೇಂದ್ರ ಹೆಗ್ಡೆ, ಸಿಎ.ಶ್ರೀರಕ್ಷಾ. ಕೆ.ಎನ್., ಕೌನ್ಸಿಲ್ ಸದಸ್ಯ ಸಿಎ.ಮಧುಕರ್ ಎನ್.ಹಿರೆಗಂಗೆ, ಪ್ರಾದೇಶಿಕ ಕೌನ್ಸಿಲ್ ಸದಸ್ಯರಾಗಿ ಸಿಎ. ಪ್ರಮೋದ್ ಆರ್.ಹೆಗ್ಡೆ, ಸಿಎ. ಪಂಪಣ್ಣಬಿ.ಇ ಆಯ್ಕೆಯಾಗಿದ್ದಾರೆ.
