ಉದಯವಾಹಿನಿ, ಬೀದರ್: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಕುಂಬಾರ ಸಮಾಜದಿಂದ ನಗರದಲ್ಲಿ ಗುರುವಾರ ಸಂತ ಕವಿ ಸರ್ವಜ್ಞ ಜಯಂತಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ‘ಬೀದರ್ ಜಿಲ್ಲೆಯಲ್ಲಿ 127 ನೋಂದಾಯಿತ ಮೈಕ್ರೋ ಫೈನಾನ್ಸ್‌ಗಳು ಕೆಲಸ ನಿರ್ವಹಿಸುತ್ತಿದ್ದು, 1.79 ಲಕ್ಷ ಜನರಿಗೆ ₹1,193 ಕೋಟಿ ಸಾಲ ವಿತರಿಸಿವೆ.
ಯಾರ ಬಳಿಯೂ ಬಲವಂತದಿಂದ ಸಾಲ ವಸೂಲಿ ಮಾಡುವಂತಿಲ್ಲ. ಆ ತರಹ ನಡೆದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಎಚ್ಚರಿಕೆ ನೀಡಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಲ ಮರು ಪಾವತಿಸುವ ಸಾಮರ್ಥ್ಯ ನೋಡಿಕೊಂಡು ಸಾಲ ವಿತರಿಸಬೇಕು. ಬಡತನ ನಿವಾರಣೆ, ಬಡ ಮಹಿಳೆಯರ ಸಬಲೀಕರಣಕ್ಕೆ ಸಾಲ ಕೊಡಬೇಕು. ಒಬ್ಬ ವ್ಯಕ್ತಿ ಕನಿಷ್ಠ ಮೂರು ಕಡೆಗಳಲ್ಲಿ ಸಾಲ ಪಡೆಯಬಹುದು. ಸಾಲ ಕೊಟ್ಟವರಿಗೆ ಕಡ್ಡಾಯವಾಗಿ ‘ಲೋನ್ ಕಾರ್ಡ್’ ಕೊಡಬೇಕು. ಎಲ್ಲ ವಿವರ ಅದರಲ್ಲಿ ದಾಖಲು ಮಾಡಿರಬೇಕು’ ಎಂದು ಹೇಳಿದರು.
‘ಒಬ್ಬರಿಗೆ ಗರಿಷ್ಠ 3 ಲಕ್ಷ ಸಾಲ ಕೊಡಬಹುದು. ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್‌ಗಳು, ಲೇವಾದೇವಿ ವ್ಯಾಪಾರಸ್ಥರು ಆರ್‌ಬಿಐ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಎಲ್ಲರೂ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ವರ್ಷ ವರ್ಷ ನೋಂದಣಿ ಮಾಡಿಸುವುದು ಕಡ್ಡಾಯ ಹೊತ್ತು ಮುಳುಗಿದ ನಂತರ ಯಾರ ಮನೆಗೂ ಹೋಗಿ ಸಾಲ ಕೇಳಿ ಕಿರುಕುಳ ಕೊಡಬಾರದು’ ಎಂದು ತಿಳಿಸಿದರು. ‘ಫೈನಾನ್ಸ್‌ಗಳಿಗೆ ನೋಂದಣಿ ಮಾಡಿಸಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಆರಂಭಿಸಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸೇರಿದಂತೆ ಇತರ ಅಧಿಕಾರಿಗಳು ಇದರಲ್ಲಿ ಇರುತ್ತಾರೆ. ಸಹಕಾರ ಇಲಾಖೆಯ ಆನ್‌ಲೈನ್ ಪೋರ್ಟಲ್ ನಲ್ಲೂ ಅರ್ಜಿ ಸಲ್ಲಿಸಬಹುದು’ ಎಂದು ವಿವರಿಸಿದರು.
