ಉದಯವಾಹಿನಿ, ಅಥಣಿ : ತಾಲೂಕಿನ ತೆಲಸಂಗ ಗ್ರಾಮದಲ್ಲಿರುವ ಡೋಣಿ ಹಳ್ಳದ ಪಕ್ಕದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಉದ್ದೇಶ ಇಟ್ಟುಕೊಂಡು ಒಳಗಡೆ ಕಾಂಕ್ರೀಟ್ ರಿಂಗ್ ಹಾಕಿ ತೆರೆದ ಬಾವಿಯನ್ನು ಸುಮಾರು 29 ಲಕ್ಷ ರೂಗಳ ವೆಚ್ಚದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ.ಬೆಳಗಾವಿ ಜಿಲ್ಲೆಯಲ್ಲಿಯೇ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾದರಿಯಾಗಿ ನಿರ್ಮಾಣಗೊಂಡಿರುವ ಬಾವಿ ಸ್ಥಳಕ್ಕೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಭೇಟಿ ನೀಡಿ ಬಾವಿಯ ಕಾಂಕ್ರೀಟ್ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಬಾವಿ ನಿರ್ಮಾಣ ಮಾಡಿದ ಗುತ್ತಿಗೆದಾರ ಸಿದ್ದು ಕೊಕಟನೂರ. ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ ಎಂ ಖೊಬ್ರಿ. ಅಪ್ಪು ಜಮಾದಾರ. ಧರೇಪ್ಪಾ ಮಾಳಿ. ಸುರೇಶ ಕೊಳಂಬಿ. ಈಶ್ವರ ಉಂಡೋಡಿ. ಮಾಯಪ್ಪಾ ಸಾವಳಗಿ. ಸುಭಾಸ್ ಖೊಬ್ರಿ. ಸಿದ್ದು ನಿಡೋಣಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು
