ಉದಯವಾಹಿನಿ, ಗದಗ: ಗ್ಯಾರಂಟಿಗಳು ರಾಜಕೀಯ ಲಾಭಕ್ಕಾಗಿ ಮಾಡಿದ ಯೋಜನೆ. ಜನರು, ತಾಯಂದಿರ ಕಣ್ಣಲ್ಲಿ ಮಣ್ಣು ಹಾಕುವ ಯೋಜನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಗೃಹಲಕ್ಷ್ಮಿ ಹಣ ಸಂಬಳವೇ ಅಂತ ಕೇಳುತ್ತಾರೆ. ಅದು ಗೌರವಧನ ಪ್ರತಿ ತಿಂಗಳು ಕೊಟ್ಟಿಲ್ಲ ಅಂದರೆ ಗೌರವ ಕೊಟ್ಟಿಲ್ಲ ಎಂದರ್ಥ.
ಹೆಣ್ಣು ಮಕ್ಕಳಿಗೆ ಗೌರವ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.
ಗೃಹಲಕ್ಷ್ಮಿ ಹಣ ಯಾವ ತಿಂಗಳೂ ಸರಿಯಾಗಿ ಬಂದಿಲ್ಲ. ರಾಜ್ಯ ಸರ್ಕಾರದ ಹಣಕಾಸಿನ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಆದರೆ, ಸಿಎಂ ಭಂಡತನದಿಂದ ಒಪ್ಪಿಕೊಳ್ಳುತ್ತಿಲ್ಲ ಎಂದು ಶುಕ್ರವಾರ ದೂರಿದರು.
ಕೇವಲ ಗ್ಯಾರಂಟಿ ಅಷ್ಟೇ ಅಲ್ಲ, ಯಾವುದೇ ಅಭಿವೃದ್ಧಿ ಯೋಜನೆಗಳಿಗೂ ಹಣ ಇಲ್ಲ. ಸಾಲದ ರೂಪದ ಯೋಜನೆಗಳನ್ನು ಬಿಟ್ಟರೆ ಯಾವುದೂ ಇಲ್ಲ. ಕುಡಿಯುವ ನೀರಿನ ಯೋಜನೆಗೂ ಹಣ ಕೊಡದೇ ಜನರನ್ನು ಸಂಕಷ್ಟಕ್ಕೆ ದೂಡಿದೆ ಎಂದರು.
