ಉದಯವಾಹಿನಿ, ಸಿಂಧನೂರು: ತಾಲ್ಲೂಕಿನ ಗಾಂಧಿನಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಕುಡಿಯುವ ನೀರಿನ ಕೆರೆ ನಿರ್ಮಾಣಗೊಳ್ಳುತ್ತಿದ್ದು, ಕೆರೆಯ ಹೂಳು ತೆಗೆದು ಕೆರೆಯ ಸುಧಾರಣಾ ಕಾಮಗಾರಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.ಗುತ್ತಿಗೆದಾರರು ಕ್ರಿಯಾ ಯೋಜನೆಯಲ್ಲಿರುವಂತೆ ಕಾಮಗಾರಿ ಮಾಡುತ್ತಿರುವುದಾಗಿ ಹೇಳುತ್ತಿರುವುದರಿಂದ ಜಟಾಪಟಿ ಶುರುವಾಗಿ ಕಾಮಗಾರಿ ಸ್ಥಗಿತಗೊಂಡಿದೆ.
‘ಸ್ವಜಲಧಾರ’ ಯೋಜನೆಯಲ್ಲಿ 20 ವರ್ಷಗಳ ಹಿಂದೆ ಕರೆ ನಿರ್ಮಾಣಗೊಂಡಿದ್ದು, ಜನಸಂಖ್ಯೆಗನುಗುಣವಾಗಿ ಕೆರೆಯನ್ನು ವಿಸ್ತರಿಸಿ ಹೆಚ್ಚಿನ ನೀರಿನ ಸಂಗ್ರಹ ಮಾಡುವ ಉದ್ದೇಶದಿಂದ ಶಾಸಕ ಹಂಪನಗೌಡ ಬಾದರ್ಲಿ ಅವರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ ₹18 ಲಕ್ಷ ಹಣ ಬಿಡುಗಡೆ ಮಾಡಿಸಿ, ನಿರ್ಮಾಣದ ಜವಾಬ್ದಾರಿಯನ್ನು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಗೆ ವಹಿಸಿ ಕೊಡಲಾಗಿದೆ.
15 ಮೀಟರ್ ಕೆರೆಯ ಅಗಲ ವಿಸ್ತರಣೆ, ಒಡ್ಡು ನಿರ್ಮಾಣಕ್ಕೆ ₹50 ಲಕ್ಷ. ಎರಡು ಕಡೆಗಳಲ್ಲಿ ಫೆನಿಸಿಂಗ್ ನಿರ್ಮಾಣಕ್ಕೆ ₹30 ಲಕ್ಷ ನಿಗದಿ
ಪಡಿಸಲಾಗಿದೆ. ಲಕ್ಷ್ಮಿನಾರಾಯಣ ದುಗಿನ್ ಎನ್ನುವವರು ಕೆರೆ ನಿರ್ಮಾಣದ ಗುತ್ತಿಗೆಯನ್ನು ಪಡೆದಿದ್ದಾರೆ.ಕೆರೆ ನಿರ್ಮಿಸಿ 20 ವರ್ಷ ಪೂರೈಸಿರುವುದರಿಂದ ಒಡ್ಡು ನಿರ್ಮಾಣದ ಪೂರ್ವದಲ್ಲಿ ಹೂಳನ್ನು ತೆರವುಗೊಳಿಸಿ ರಾಂಪ್ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
