ಉದಯವಾಹಿನಿ, ಉಪ್ಪಿನಂಗಡಿ: ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಅಷ್ಟಮಿ ಒಂದನೇ ಮಖೆ ಜಾತ್ರೆಯ ಪ್ರಯುಕ್ತ ಗುರುವಾರ ರಾತ್ರಿ ರಥೋತ್ಸವ ನಡೆಯಿತು.ಕೆಮ್ಮಿಂಜೆ ನಾಗೇಶ್ ತಂತ್ರಿ ನೇತೃತ್ವದಲ್ಲಿ ದೇವಳದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನಡೆದು, ಬಲಿ ಹೊರಟು ಉತ್ಸವ ನಡೆಯಿತು. ಬಳಿಕ ರಥ ಬೀದಿಯಲ್ಲಿ ರಥೋತ್ಸವ, ಮಹಾಪೂಜೆ ನಡೆಯಿತು. ನಸುಕಿನಿಂದಲೇ ನದಿ ಸಂಗಮ ಸ್ಥಳದಲ್ಲಿ ಮಖೆ ತೀರ್ಥ ಸ್ನಾನ ನಡೆಯಿತು. ದರ್ಶನ ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ, ಅನ್ನ ಸಂತರ್ಪಣೆ ಜರಗಿತು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸಮಿತಿ ಸದಸ್ಯರಾದ ಹರೀಶ್ ಉಪಾಧ್ಯಾಯ, ಸೋಮನಾಥ, ಡಾ.ರಮ್ಮಾ ರಾಜಾರಾಮ್, ಅನಿತಾ ಕೇಶವ ಗೌಡ, ಗೋಪಾಲಕೃಷ್ಣ ರೈ ಜಿ.ಕೃಷ್ಣ ರಾವ್ ಅರ್ತಿಲ, ದೇವಿದಾಸ್ ರೈ. ವೆಂಕಪ್ಪ ಪೂಜಾರಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣ ಪ್ರಸಾದ್ ಬಡಿಲ, ದಿವಾಕರ, ಪದ್ಮನಾಭ, ಪ್ರಮುಖರಾದ ಕರುಣಾಕರ ಸುವರ್ಣ, ಕಂಗ್ಲೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಸುನಿಲ್, ಪ್ರೇಮಲತಾ ಕಾಂಚನ, ಜಯಂತ ಪೊರೋಳಿ, ಉಷಾಚಂದ್ರ ಮುಳಿಯ, ಡಾ.ರಾಜಾರಾಮ ಕೆ.ಬಿ., ಸುಂದರ ಗೌಡ, ಸಂಜೀವ ಗಾಣಿಗ, ರಾಮಚಂದ್ರ ಮಣಿಯಾಣಿ, ಚಿದಾನಂದ ನಾಯಕ್, ಸುಧಾಕರ ಶೆಟ್ಟಿ, ಪ್ರಶಾಂತ್ ನೆಕ್ಕಿಲಾಡಿ, ಕೈಲಾರ್ ರಾಜಗೋಪಾಲ ಭಟ್, ಡಾ.ಗೋವಿಂದ ಪ್ರಸಾದ್ ಕಜೆ, ಕೃಷ್ಣ ಶೆಣೈ, ಗೋಪಾಲ ಹೆಗ್ಡೆ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!