ಉದಯವಾಹಿನಿ, ಮೂಡಿಗೆರೆ : ತಾಲ್ಲೂಕಿನ ಕಣೆಗಡ್ಡೆ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಇಳೇಖಾನ್ ಚಂದ್ರು ಎಂಬುವವರ ಕಾಫಿ ತೋಟಕ್ಕೆ ಬೆಂಕಿ ತಗುಲಿ, 15 ಎಕರೆಯನ್ನು ಕಾಫಿ ತೋಟ ಸುಟ್ಟುಹೋಗಿದೆ.ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳೀಯರು, ಅಕ್ಕಪಕ್ಕದ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು ಧಾವಿಸಿ, ಬೆಂಕಿ ನಂದಿಸಲು ಯತ್ನಿಸಿದರು.ಆದರೆ, ಅಷ್ಟರಲ್ಲಾಗಲೇ ಸಮೀಪದ ತೋಟಗಳಿಗೂ ಬೆಂಕಿ ವ್ಯಾಪಿಸಿತ್ತು.
ನಾಲೈದು ಮಂದಿಯ ಕಾಫಿ ತೋಟವನ್ನು ಆಹುತಿ ಪಡೆಯಿತು. ತೋಟಗಳಿಗೆ ಹೊಂದಿಕೊಂಡಂತೆ ಸಾರಗೋಡು ಮೀಸಲು ಅರಣ್ಯವಿದ್ದು,ಅರಣ್ಯಕ್ಕೆ ಬೆಂಕಿ ತಗುಲುವುದನ್ನು ತಡೆಯಲು ಸಿಬ್ಬಂದಿ ಹಾಗೂ
ಸಾರ್ವಜನಿಕರು ಹರಸಾಹಸಪಟ್ಟರು. ಮೂಡಿಗೆರೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಎರಡು
ಗಂಟೆಗೂ ಹೆಚ್ಚುಕಾಲ ಕಾರ್ಯಚರಣೆ ನಡೆಸಿದ ನಂತರ ಬೆಂಕಿನಿಯಂತ್ರಣಕ್ಕೆ ಬಂತು. ಆದರೆ, ಅಷ್ಟರಲ್ಲಾಗಲೇ ಲಕ್ಷಾಂತರ ಮೌಲ್ಯದ ಕಾಫಿ ತೋಟ ಭಸ್ಮವಾಗಿತ್ತು.’ತೋಟಕ್ಕೆ ಬೆಂಕಿ ಹತ್ತಿಕೊಳ್ಳಲು ಕಾರಣ ಏನು ಎಂಬುದು ಗೊತ್ತಾಗಿಲ್ಲ.ಯಾವುದೇ ದೂರು ಬಂದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!