ಉದಯವಾಹಿನಿ, ದಾವಣಗೆರೆ: ರಾಜ್ಯದಲ್ಲಿ ಹಕ್ಕಿಜ್ವರದ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಕೋಳಿ ಮಾಂಸ ಹಾಗೂ ಮೊಟ್ಟೆ ಧಾರಣೆ ಇಳಿಮುಖವಾಗಿದೆ. ಚಿಕನ್ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದು, ಹಕ್ಕಿಜ್ವರದ ಭೀತಿಗೆ ಜಿಲ್ಲೆಯ ಕುಕ್ಕುಟೋದ್ಯಮ ತತ್ತರಗೊಂಡಿದೆ. ಆಂಧ್ರಪ್ರದೇಶದಲ್ಲಿ ಹಕ್ಕಿಜ್ವರ ಪತ್ತೆಯಾಗುತ್ತಿದ್ದಂತೆ ಕುಕ್ಕುಟೋದ್ಯಮದಲ್ಲಿ ತಲ್ಲಣ ಉಂಟಾಗಿತ್ತು. ಚಿಕ್ಕಬಳ್ಳಾಪುರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿಜ್ವರಕ್ಕೆ ಕೋಳಿಗಳು ಬಲಿಯಾಗುತ್ತಿದ್ದಂತೆ ಆತಂಕ ಇನ್ನಷ್ಟು ಹೆಚ್ಚಾಗಿದೆ. ಕೋಳಿ ಫಾರಂಗಳಲ್ಲಿ ಕೈಗೊಳ್ಳಬೇಕಿರುವ ಅಗತ್ಯ ಕ್ರಮಗಳಿಗೆ ಸೂಚನೆ ನೀಡಿದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಈ ಬಗ್ಗೆ, ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಜಾಗೃತಿಗೂ ಸಜ್ಜಾಗುತ್ತಿದೆ. ಎರಡು ವಾರಗಳ ಹಿಂದೆ ಜಿಲ್ಲೆಯಲ್ಲಿ ₹ 5 ಇದ್ದ ಪ್ರತಿ ಮೊಟ್ಟೆ ಸಗಟು ಧಾರಣೆ * 4.20ಕ್ಕೆ ಕುಸಿದಿದೆ. ಕೆ.ಜಿ. ಮಾಂಸದ ಕೋಳಿಯ ಸಗಟು ದರ 110ರಿಂದ 70ಕ್ಕೆ ಇಳಿಕೆಯಾಗಿದೆ. ಮೊಟ್ಟೆ ಹಾಗೂ ಮಾಂಸಕ್ಕೆ ಬೇಡಿಕೆ ಕೂಡ ಕಡಿಮೆಯಾಗಿದೆ’ ಎಂದು ದಾವಣಗೆರೆಯ ಕೋಳಿ ಫಾರಂ ಮಾಲೀಕ ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ 267 ಮಾಂಸದ ಕೋಳಿಯ ಫಾರಂಗಳಿದ್ದು, ಅಂದಾಜು 3.5 ಲಕ್ಷದಷ್ಟು ಕೋಳಿಗಳಿವೆ. 29 ಮೊಟ್ಟೆ ಕೋಳಿಯ ಫಾರಂಗಳಿದ್ದು, ಅಂದಾಜು 30 ಲಕ್ಷ ಮೊಟ್ಟೆ ಕೋಳಿಗಳಿವೆ. ಮೊಟ್ಟೆ ಕೋಳಿಗಳ ಪೈಕಿ ಶೇ 80ರಷ್ಟು ಫಾರಂಗಳು ದಾವಣಗೆರೆ ತಾಲ್ಲೂಕಿನಲ್ಲಿವೆ ಹರಿಹರ, ಜಗಳೂರು ಸೇರಿ ಇತರೆಡೆಯೂ ಈ ಫಾರಂಗಳ ಸಂಖ್ಯೆ ಕಡಿಮೆ ಇದೆ. ಮಾಂಸದ ಕೋಳಿಯ ಫಾರಂಗಳ ಗಾತ್ರ ಚಿಕ್ಕದಿದ್ದು.
