ಉದಯವಾಹಿನಿ, ಅರಸೀಕೆರೆ: ನಗರದ ಲಕ್ಷ್ಮಿ ಪುರ ಬಡಾವಣೆಯ ಬಲಮುರಿ ಗಣಪತಿ ಹಾಗೂ ಅನ್ನಪೂರ್ಣೇಶ್ವರಿ ದೇವಸ್ಥಾನದ 23ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.ಮುಂಜಾನೆ ದೇವಸ್ಥಾನದಲ್ಲಿ ಫಲಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಹೋಮ ನಡೆಯಿತು.ಬಲಮುರಿ ಗಣಪತಿ, ಅನ್ನಪೂರ್ಣೇಶ್ವರಿ, ಓಂಕಾರೇಶ್ವರ, ಸುಬ್ರಹ್ಮಣೇಶ್ವರ ಹಾಗೂ ನವಗ್ರಹಗಳಿಗೆ ವಿಶೇಷ ಪೂಜೆಯೊಂದಿಗೆ ಪುಷ್ಪಾಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಲಾಯಿತು. ಭಕ್ತರು ದೇವರಿಗೆ ಹಣ್ಣು ಕಾಯಿ ಪೂಜೆ ಸಲ್ಲಿಸಿ ನವಗ್ರಹ ಪ್ರದಕ್ಷಣೆ ಹಾಕಿ ಪ್ರಾರ್ಥಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಶಾಸಕ ಶಿವಲಿಂಗೇಗೌಡ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಿದ್ದರು. ದೇವಸ್ಥಾನದ ಅಧ್ಯಕ್ಷ ಕೆ.ಸಿ. ಯೋಗೀಶ್, ಗೌರವ ಅಧ್ಯಕ್ಷ ಜೆ.ಪಿ. ಜಯಣ್ಣ, ಗೌರವ ಕಾರ್ಯದರ್ಶಿ ಬಿ.ಎಂ. ಪ್ರಸನ್ನ ಕುಮಾ‌ರ್, ನಗರಸಭೆ ಸದಸ್ಯ ವೆಂಕಟಮುನಿ ಇದ್ದರು.

Leave a Reply

Your email address will not be published. Required fields are marked *

error: Content is protected !!