ಉದಯವಾಹಿನಿ, ದೇಹದ ಆರೋಗ್ಯವು ಒಂದು ಬಹು ದೊಡ್ಡ ವರದಾನವಾಗಿದೆ. ಆರೋಗ್ಯವಾಗಿರಲು ಸರಿಯಾದ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ತಜ್ಞರು ಕೂಡ ಸಮತೋಲಿತ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ. ತಾಜಾ ತರಕಾರಿಗಳು, ಹಣ್ಣುಗಳು ಆಹಾರದಲ್ಲಿ ಹೇರಳವಾಗಿರಬೇಕು. ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕರ ಆಯ್ಕೆಯಾಗಿದೆ. ಹಣ್ಣುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದಲ್ಲದೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ದೇಹದ ತೂಕ ಇಳಿಸಿಕೊಳ್ಳಲು ತುಂಬಾ ಒಳ್ಳೆಯದು.
ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಹಲವು ಹಣ್ಣುಗಳು ತುಂಬಾ ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡಲು ವಿವಿಧ ರೀತಿಯ ಹಣ್ಣುಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಮಲಬದ್ಧತೆಗೆ ಮಾತ್ರವಲ್ಲದೆ ಹಲವು ಆರೋಗ್ಯ ಸಮಸ್ಯೆಗಳಿಗೆ ಹಣ್ಣುಗಳನ್ನು ತಿನ್ನುವುದು ಅತ್ಯುತ್ತಮವಾದ ಆಯ್ಕೆಯಾಗಿದೆ. ಪ್ರಸಿದ್ಧ ಪೌಷ್ಟಿಕತಜ್ಞೆ ಖುಷಿ ಛಾಬ್ರಾ ಅವರು, ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಯಾವ ರೀತಿಯ ಹಣ್ಣುಗಳನ್ನು ತಿನ್ನಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಆರೋಗ್ಯಕರವಾಗಿರುವಂತಹ ಹಣ್ಣುಗಳು ಯಾವುವು ಎಂಬುದನ್ನು ತಿಳಿಯೋಣ.
ಹೊಟ್ಟೆಯ ಸಮಸ್ಯೆಗೆ ಚಿಕ್ಕುಹಣ್ಣು: ಅನೇಕ ಜನರು ಚಿಕ್ಕು ಎಂದು ಕರೆಯಲ್ಪಡುವ ಸಪೋಟಾ ಹಣ್ಣನ್ನು ಸೇವಿಸಲು ಇಷ್ಟಪಡುತ್ತಾರೆ. ಸಪೋಟಾ ಹಣ್ಣು ತುಂಬಾ ಸಿಹಿಯಾಗಿರುತ್ತದೆ. ಸಪೋಟಾದಲ್ಲಿ ವಿಟಮಿನ್ ಎ, ಸಿ, ಇ, ಕೆ, ಕಬ್ಬಿಣ, ಕ್ಯಾಲ್ಸಿಯಂ, ಫೈಬರ್, ರಂಜಕ ಹಾಗೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಸಪೋಟಾ ಹಣ್ಣಿನಲ್ಲಿ ಟ್ಯಾನಿನ್ ಸಮೃದ್ಧವಾಗಿದೆ. ಇದು ನೈಸರ್ಗಿಕ ಉರಿಯೂತ ನಿವಾರಕವಾಗಿಯು ಕಾರ್ಯನಿರ್ವಹಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಗ್ಯಾಸ್ಟ್ರಿಕ್, ಆಮ್ಲೀಯತೆ, ಉಬ್ಬರದಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಪೋಟಾ ಉತ್ತಮ ಹಣ್ಣು ಎಂದು ಪೌಷ್ಟಿಕತಜ್ಞೆ ಖುಷಿ ಛಾಬ್ರಾ ಹೇಳುತ್ತಾರೆ.
ರೋಗನಿರೋಧಕ ಶಕ್ತಿ ವೃದ್ಧಿಗೆ ಕಿತ್ತಳೆ: ಕಿತ್ತಳೆ ರುಚಿಯಲ್ಲಿ ಸಿಹಿ ಹಾಗೂ ಹುಳಿಯಾಗಿದೆ. ಕಿತ್ತಳೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ಕಾಲೋಚಿತ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಕಿತ್ತಳೆಯಲ್ಲಿ ಬಿಳಿ ರಕ್ತ ಕಣಗಳನ್ನು ಸಹ ಹೆಚ್ಚಿಸುತ್ತದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ, ಹೆಚ್ಚಿನ ಫೈಬರ್ ಹೊಂದಿದೆ. ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಕಿತ್ತಳೆ ಹಣ್ಣು ಒಳ್ಳೆಯದು.
ಮಲಬದ್ಧತೆಗೆ ಪರ್ಸಿಮನ್: ಪರ್ಸಿಮನ್ವನ್ನು ಕೆಂಪು ಸೀತಾಫಲ ಎಂದು ಕರೆಯುತ್ತಾರೆ. ಸೀತಾಫಲ ಕುಟುಂಬದ ಹಣ್ಣು. ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಆಮ್ಲಾ ಅತ್ಯುತ್ತಮ ಆಯ್ಕೆಯಾಗಿದೆ. ಪರ್ಸಿಮನ್ ಕರಗುವ ಫೈಬರ್ ಅನ್ನು ಹೊಂದಿರುತ್ತದೆ. ಇದು ಮಲಬದ್ಧತೆಯಿಂದ ಪರಿಹಾರವನ್ನು ನೀಡಲು ಸಹಾಯವಾಗುತ್ತದೆ. ಹೊಟ್ಟೆಯ ಕೆಳಭಾಗದಲ್ಲಿರುವ ಮಲವನ್ನು ಮೃದುಗೊಳಿಸುತ್ತದೆ. ಪರ್ಸಿಮನ್ ನೈಸರ್ಗಿಕ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ.
