ಉದಯವಾಹಿನಿ, ಬೆಳಗಿನ ಉಪಹಾರದಲ್ಲಿ ಇಡ್ಲಿಗಳನ್ನು ಬಹುತೇಕರು ಸೇವಿಸುತ್ತಾರೆ. ಇಡ್ಲಿಯಲ್ಲಿ ಯಾವುದೇ ಎಣ್ಣೆ, ಮಸಾಲೆ ಇರುವುದಿಲ್ಲ. ಈ ರೆಸಿಪಿಯು ಹೊಟ್ಟೆಗೆ ಉತ್ತಮ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಇಡ್ಲಿ ಬಹುತೇಕರ ನೆಚ್ಚಿನ ಉಪಹಾರವಾಗಿದೆ. ಇವುಗಳನ್ನು ತಯಾರಿಸಲು ನೀವು ಹಿಟ್ಟನ್ನು ಹಿಂದಿನ ದಿನ ನೆನೆಸಿ ರುಬ್ಬಿಕೊಳ್ಳಬೇಕಾಗುತ್ತದೆ. ಬಳಿಕ, ನೀವು ಹಿಟ್ಟನ್ನು ಹುದುಗಿಸಬೇಕಾಗುತ್ತದೆ. ಕೆಲವೊಮ್ಮೆ ನಿಮಗೆ ಅಷ್ಟು ಸಮಯವಿರುವುದಿಲ್ಲ. ಈ ಸಂದರ್ಭಗಳಲ್ಲಿಯೂ ಸಹ ರುಚಿಕರವಾದ ಇಡ್ಲಿಗಳನ್ನು ಸ್ಥಳದಲ್ಲೇ ತಯಾರಿಸಬಹುದು.
ಅದು ಹೇಗೆ ಎನ್ನು ಪ್ರಶ್ನೆಯು ಹಲವು ಜನರನ್ನು ಕಾಡುತ್ತದೆ. ಈ ರೆಸಿಪಿಯನ್ನು ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ. ಇಡ್ಲಿಯನ್ನು ಕೇವಲ ನಿಮಿಷಗಳಲ್ಲಿ ತಯಾರಿಸಲಾಗುತ್ತದೆ. ಒಂದೇ ರೀತಿಯ ಪದಾರ್ಥಗಳೊಂದಿಗೆ ಸರಳವಾಗಿ ಇಡ್ಲಿಗಳನ್ನು ತಯಾರಿಸಬಹುದು. ಈ ವಿಧಾನಗಳನ್ನು ಅನುಸರಿಸಿದರೆ ಇಡ್ಲಿಗಳು ಸೂಪರ್ ಸಾಫ್ಟ್ ಹಾಗೂ ರುಚಿಕರವಾಗಿರುತ್ತವೆ. ಒಮ್ಮೆ ಈ ಇಡ್ಲಿಯ ರುಚಿಯನ್ನು ನೋಡಿದರೆ ಸಾಕು ಮತ್ತೆ ಮತ್ತೆ ಸವಿಯಬೇಕು ಅನಿಸುತ್ತದೆ. ಹೆಚ್ಚಿನ ತೊಂದರೆ ತೆಗೆದುಕೊಳ್ಳದೆ ಇನಸ್ಟಂಟ್ ಇಡ್ಲಿ ರೆಸಿಪಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ವಿವರವಾಗಿ ತಿಳಿಯೋಣ.
ಸೂಪರ್ ಸಾಫ್ಟ್ ಇಡ್ಲಿಗಾಗಿ ಬೇಕಾಗುವ ಸಾಮಗ್ರಿಗಳೇನು?:
ಅವಲಕ್ಕಿ – 1 ಕಪ್
ಮೊಸರು – 1.5 ಕಪ್
ಬೇಕಿಂಗ್ ಸೋಡಾ – 1/2 ಟೀಚಮಚ
ಬಾಂಬೆ ರವೆ – 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – ಸ್ವಲ್ಪ
ಮನೆ ಎಲ್ಲಾ ಸದಸ್ಯರಿಗೂ ಇಷ್ಟವಾಗುವಂತ ಸೂಪರ್ ಸಾಫ್ಟ್ ಇಡ್ಲಿ ತಯಾರಿಸಲು ಮೊದಲಿಗೆ, ಒಂದು ಬಟ್ಟಲಿನಲ್ಲಿ ಒಂದು ಕಪ್ ಅಕ್ಕಿಯನ್ನು ಹಾಕಿ ತೊಳೆಯಿರಿ. ಬಳಿಕ ಅದನ್ನು 30 ನಿಮಿಷಗಳ ಕಾಲ ಸಾಕಷ್ಟು ನೀರಿನಲ್ಲಿ ನೆನೆಸಿಡಿ. ಅರ್ಧ ಗಂಟೆಯ ಬಳಿಕ, ನೆನೆಸಿದ ಅವಲಕ್ಕಿಯನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ, ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕಾಗುತ್ತದೆ. ಮತ್ತೊಂದೆಡೆ ಒಂದು ಬಟ್ಟಲಿನಲ್ಲಿ ಒಂದೂವರೆ ಕಪ್ ಮೊಸರು ಹಾಗೂ ಅರ್ಧ ಟೀಸ್ಪೂನ್ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಇದಕ್ಕೆ ಒಂದು ಕಪ್ ಬಾಂಬೆ ರವೆ ಸೇರಿಸಿ ಮಿಶ್ರಣ ಮಾಡಿ. ಬಳಿಕ ಇದನ್ನು ಮುಚ್ಚಿ 30 ನಿಮಿಷಗಳ ಕಾಲ ಪಕ್ಕಕ್ಕೆ ಇಡಿ.
