ಉದಯವಾಹಿನಿ, ಬೆಂಗಳೂರು: ವಿಧಾನಸಭೆ ಕಾರ್ಯಕಲಾಪಗಳ ನೇರಪ್ರಸಾರದಲ್ಲಿ ಪ್ರತಿಪಕ್ಷಗಳ ಶಾಸಕರು ಮಾತನಾಡುವ ವಿಚಾರ ಪ್ರಸ್ತಾಪವಾಗುತ್ತಿಲ್ಲ ಎಂದು ಬಿಜೆಪಿ ಶಾಸಕರು ಮಾಡಿದ ಆಕ್ಷೇಪ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಎಡೆಮಾಡಿಕೊಟ್ಟು ಸದನವನ್ನು 10 ನಿಮಿಷ ಮುಂದೂಡಿದ ಪ್ರಸಂಗ ವಿಧಾನಸಭೆಯಲ್ಲಿ ಜರುಗಿತು. ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ರವರು ಕೆಪಿಎಸ್‌‍ಸಿ ನೇಮಕಾತಿ ವಿಚಾರ ಕುರಿತು ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡುತ್ತಿದ್ದ ಸಂದರ್ಭದಲ್ಲಿ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಲು ಎದ್ದುನಿಂತರು.

ಆ ಸಂದರ್ಭದಲ್ಲಿ ವಿರೋಧಪಕ್ಷದ ಉಪನಾಯಕ ಅರವಿಂದ್‌ ಬೆಲ್ಲದ್‌ ಮಾತನಾಡಿ, ಸದನದಲ್ಲಿನ ಕಾರ್ಯಕಲಾಪಗಳು ನೇರ ಪ್ರಸಾರವಾಗುತ್ತಿವೆ. ಆದರೆ ನಮ ನಾಯಕರು ಮಾತನಾಡುವ
ವಿಚಾರ ಸದನದ ಸಭಾಂಗಣದಲ್ಲಿ ಅಳವಡಿಸಿರುವ ಟಿವಿಗಳಲ್ಲಿ ಬರುತ್ತಿಲ್ಲ. ನೀವು ಪ್ರಸಾರ ಮಾಡದಂತೆ ಸೂಚನೆ ಕೊಟ್ಟಿದ್ದೀರ. ಈ ವಿಚಾರವನ್ನು ನಾವು ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲೂ ಪ್ರಸ್ತಾಪ ಮಾಡಿದ್ದೆವು ಎಂದು ಹೇಳಿದರು.
ಅಲ್ಲದೆ ಈ ಹಿಂದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸದನದ ಕಾರ್ಯಕಲಾಪಗಳ ನೇರ ಪ್ರಸಾರ ಮಾಡುತ್ತಿತ್ತು. ಈಗ ಅದನ್ನು ಕಾಂಗ್ರೆಸ್‌‍ ಕಾರ್ಯಕರ್ತರಿಗೆ ಏಕೆ ಕೊಟ್ಟಿದ್ದೀರಿ?, ಅಲ್ಲದೆ ಕೆಲ ಸಚಿವರು ಅನಾವಶ್ಯಕವಾಗಿ ಎದ್ದು ನಿಲ್ಲುತ್ತಾರೆ. ಅದನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು. ಸುನಿಲ್‌ಕುಮಾರ್‌ ಮಾತನಾಡಿ, ಯಾವ ನಟ್ಟು, ಬೋಲ್ಟು ಲೂಸ್‌‍ ಆಗಿದೆ ಹೇಳಿ. ಅದನ್ನು ಸರಿಪಡಿಸಬೇಕಲ್ಲವೇ? ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!