ಉದಯವಾಹಿನಿ, ಕೆ.ಆರ್.ಪುರ: ಮಾಧವ ಗಳೆಯರ ಬಳಗ ಮತ್ತು ವಿಶ್ವಹಿಂದು ಪರಿಷದ್ ಅವರ ಆಶ್ರಯದಲ್ಲಿ ಮಹದೇವಪುರ ಕ್ಷೇತ್ರದ ಇಮ್ಮಡಹಳ್ಳಿಯಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಕುಸ್ತಿ ಪಂದ್ಯಗಳಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ದೇಶಿ ಕ್ರೀಡೆಗಳಲ್ಲಿ ಕುಸ್ತಿಗೆ ಅತಿಹೆಚ್ಚು ಪ್ರಾಮುಖ್ಯತೆಯಿದ್ದು,ಕುಸ್ತಿ ಪಂದ್ಯಾವಳಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಬೇಕಿದೆ ಎಂದು ನುಡಿದರು.
ಕ್ಷೇತ್ರದ ಇಮ್ಮಡಿಹಳ್ಳಿ ಗ್ರಾಮದಲ್ಲಿ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಸಲಾಗುತ್ತಿದ್ದು, ಪ್ರತಿಯೊಂದು ಜಾತ್ರ ಮಹೋತ್ಸವದಲ್ಲೂ ಕುಸ್ತಿ ಪಂದ್ಯಾವಳಿಯ ಆಯೋಜನೆ ಅಗತ್ಯವಿದೆ ಎಂದು ಹೇಳಿದರು.
ಈಗಿನ ಮಕ್ಕಳು ಮೊಬೈಲ್ ಫೋನ್ ಗೀಳಿಗೆ ಬಿದಿದ್ದು,ಇದರಿಂದ ದೇಹದಂಡನೆ ಮಾಡುವ ವ್ಯಾಯಾಮಗಳಿಂದಲೂ ದೂರಾಗಿದ್ದಾರೆ ಅಂತಹ ಮಕ್ಕಳಿಗೆ ದೇಶಿಯ ಕ್ರೀಡೆಗಳ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯ ಶ್ರೀನಿವಾಸ್,ಮಂಡಲ ಅದ್ಯಕ್ಷರಾದ ಶ್ರೀಧರ ರಡ್ಡಿ, ಪಿಳ್ಳಪ್ಪ,ರಾಜ್ಯ ಪರಿಷತ್ ಸದಸ್ಯ ಎಲ್. ರಾಜೇಶ್, ಮುಖಂಡರಾದ ರಾಜರೆಡ್ಡಿ,ಮಹೇಂದ್ರ ಮೋದಿ,ವರ್ತೂರು ಶ್ರೀಧರ್, ಮಧು, ಶ್ರೀನಿವಾಸ, ರವಿ, ಯೊಗೇಶ್ ಆರಾಧ್ಯ ಗಳೆಯರ ಬಳಗ ಮತ್ತು ಪರಿಷದ್‌ನ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
