ಉದಯವಾಹಿನಿ, ದುಬೈ: ಶತಕೋಟಿ ಭಾರತೀಯರು ಚಾತಕ ಪಕ್ಷಯಂತೆ ಎದುರು ನೋಡುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಪಿ- 2025 ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಫೈನಲ್ ಪಂದ್ಯ ನಾಳೆ ನಡೆಯಲಿದೆ. ಎರಡು ತಂಡಗಳು ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಲಿದ್ದು, ಫೈನಲ್ ಪಂದ್ಯವು ನಾಳೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಈ ಅಂತಿಮ ಪಂದ್ಯದಲ್ಲಿ ಭಾರತ ಗೆದ್ದು ಬರಲಿ ಎಂದು ಕ್ರೀಡಾಭಿಮಾನಿಗಳು ದೇಶಾದ್ಯಂತ ಹೋಮ-ಹವನ ಪೂಜೆಪುನಸ್ಕಾರದಲ್ಲಿ ತೊಡಗಿದ್ದಾರೆ. ವಿಶೇಷತೆ ಎಂದರೆ ಉಭಯ ತಂಡಗಳು 25 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್‌್ಸ ಟ್ರೋಫಿ ಫೈನಲ್ನಲ್ಲಿ ಎದುರಾಗುತ್ತಿರುವುದು. ಅಜೇಯವಾಗಿ ಫೈನಲ್ ಪ್ರವೇಶಿಸಿರುವ ರೋಹಿತ್ ಶರ್ಮ ಪಡೆ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗೋಚರಿಸಿದರಾದರೂ ಇತಿಹಾಸವನ್ನೊಮೆ ಕೆದಕಿದರೆ ಐಸಿಸಿ ಪ್ರಶಸ್ತಿ ಸುತ್ತಿನಲ್ಲಿ ಕೀಸ್ ವಿರುದ್ಧ ಭಾರತ ಇದುವರೆಗೂ ಗೆದ್ದಿಲ್ಲ.
ಹಾಲಿ ಚಾಂಪಿಯನ್ ಆಗಿದ್ದ ಭಾರತ ತಂಡ 2017ರ ಆವೃತ್ತಿಯಲ್ಲಿಯೂ ಫೈನಲ್ ಪ್ರವೇಶಿಸಿತ್ತು. ಆದರೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಲೀಗ್ ಹಂತದಲ್ಲಿ ಪಾಕಿಸ್ತಾನಕ್ಕೆ 8 ವಿಕೆಟ್ ಸೋಲುಣಿಸಿದ್ದ ಭಾರತ ಫೈನಲ್ನಲ್ಲಿ ಶರಣಾಯಿತು. ಅದು ಕೂಡ 180 ರನ್ ಅಂತರದ ಸೋಲು! ವಿರಾಟ್ ಕೊಹ್ಲಿ ಭಾರತ ತಂಡದ ನಾಯಕನಾಗಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದ ವೇಳೆ ಹೆನ್ರಿ ಗಾಯಗೊಂಡಿದ್ದರು. ಆದಾಗ್ಯೂ ನ್ಯೂಜಿಲೆಂಡ್ ಆ ಪಂದ್ಯವನ್ನು 50 ರನ್ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತ್ತು.
2025ರ ಐಸಿಸಿ ಚಾಂಪಿಯನ್‌್ಸ ಟ್ರೋಫಿ ಫೈನಲ್ ಪಂದ್ಯಕ್ಕೆ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಆಘಾತ ಎದುರಾಗಿದ್ದು, ಪ್ರಮುಖ ವೇಗಿ ಮ್ಯಾಟ್ ಹೆನ್ರಿ ಭುಜದ ಗಾಯದಿಂದಾಗಿ ಫೈನಲ್ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
ಹೆನ್ರಿ ಮೈದಾನದಲ್ಲಿ ಬಿದ್ದಾಗ ಅವರ ಭುಜಕ್ಕೆ ಪೆಟಾಗಿತ್ತು. ನಂತರ ಅವರು ಸ್ವಲ್ಪ ಅಸ್ವಸ್ಥರಾಗಿದ್ದರು. ಆದರೆ ಅವರು ಮತ್ತೆ ಬೌಲಿಂಗ್ ಮಾಡಲು ಮರಳಿದ್ದು ನಮಗೆ ಸಂತಸ ತಂದಿದೆ ಎಂದು ನ್ಯೂಜಿಲೆಂಡ್ ಮುಖ್ಯ ಕೋಚ್ ಗ್ಯಾರಿ ಸ್ಟೀಡ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಹೆನ್ರಿ ಫೈನಲ್ನ್ನಲ್ಲಿ ಆಡಲು ನಾವು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ಈ ಹಂತದಲ್ಲಿ ಅವರ ಗಾಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಭುಜಕ್ಕೆ ಪೆಟ್ಟಾದಾಗಿನಿಂದ ಹೆನ್ರಿ ನೋವಿನಲ್ಲಿದ್ದಾರೆ. ಆದರೆ, ಅವರು ಶೀಘ್ರವೇ ಚೇತರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.
ಈ ಚಾಂಪಿಯನ್‌್ಸ ಟ್ರೋಫಿಯಲ್ಲಿ ಹೆನ್ರಿ ನ್ಯೂಜಿಲೆಂಡ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ನಾಲ್ಕು ಪಂದ್ಯಗಳಲ್ಲಿ 10 ವಿಕೆಟ್ಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಮಾರ್ಚ್ 2ರಂದು ಭಾರತ ವಿರುದ್ಧದ ಪಂದ್ಯದಲ್ಲಿ ಹೆನ್ರಿ 42 ರನ್ಗಳಿಗೆ 5 ವಿಕೆಟ್ಗಳನ್ನು ಪಡೆದು ಮಿಂಚಿದ್ದರು.
