ಉದಯವಾಹಿನಿ, ಕೆ.ಆರ್.ಪುರ, : ತಂದೆ ತಾಯಿಯ ಜೀವನವನ್ನು ಸುಧಾರಿಸಲು ಶಿಕ್ಷ ಣ ಅಗತ್ಯವಿದೆ,ಶಿಕ್ಷಣದಿಂದ ಮಾತ್ರ ತಮ್ಮ ಜೀವನ ಚಿತ್ರಣ ಹಾಗೂ ಸಮಾಜದ ಸುಧಾರಣೆ ಸಾಧ್ಯ ಎಂದು ಐಪಿಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಅವರು ತಿಳಿಸಿದರು.
ಥಣಿಸಂದ್ರದ ಎಸ್.ವಿ.ಎನ್.ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು ಆ ಮೂಲಕ ಸಮಾಜದ ಉನ್ನತಸ್ಥಾನಕ್ಕೆರಬೇಕು ಎಂದು ನುಡಿದರು.
ಶಿಸ್ತಿನ ಮನೋಭಾವನ್ನು ಮಕ್ಕಳು ರೂಡಿಸಿಕೊಳ್ಳಬೇಕು, ಶಿಸ್ತು ಜೀವನ ಮಾಡಲು ಅತ್ಯಾವಶ್ಯಕವಾಗಿದೆ ಶಿಸ್ತು ಪಾಲನೆ ವಿದ್ಯಾರ್ಥಿಗಳ ಮೊದಲ ಆದ್ಯತೆಯಾಗಬೇಕು ಎಂದು ತಿಳಿಸಿದರು.ಶಿಕ್ಷಣ ಎಂದರೆ ಕಷ್ಟದ ಕಾಲಕ್ಕೆ ಆಶ್ರಯದಂತೆ ಇರತ್ತದೆ ಹಾಗೂ ಗಳಿಸಿದ ಸಮಯದಲ್ಲಿ ಆಭರಣದಂತೆ ಕಂಗೊಳಿಸುತ್ತದೆ ವಿದ್ಯಾರ್ಥಿಗಳು ಶಾಲೆಯ ಮಟ್ಟದಲ್ಲೆ ಉತ್ತಮ ಶಿಕ್ಷಣ ಪಡೆಯಬೇಕು ಎಂದು ವಿವರಿಸಿದರು.
ಎಸ್.ವಿ.ಎನ್ ಶಾಲೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು,ಬಡಮಕ್ಕಳಿಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ ಎಂದು ನುಡಿದರು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಸುಬ್ಬರಾಜು,ಕಾರ್ಯದರ್ಶಿ ಸುಹಾಸ್,ಮುಖ್ಯ ಅತಿಥಿ ಜಗದೀಶ್ ಇದ್ದರು.

Leave a Reply

Your email address will not be published. Required fields are marked *

error: Content is protected !!