ಉದಯವಾಹಿನಿ, ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿರುವ ಅಕ್ರಮ ಚಿನ್ನ ಸಾಗಣೆದಾರರಿಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರನಟಿ ರನ್ಯಾರಾವ್‌ ಅವರಿಗೂ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಂದೇ ವಾರದಲ್ಲಿ ಮೂರು ಕಡೆಗಳಲ್ಲಿ ಚಿನ್ನದ ಅಕ್ರಮ ಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ. ಮೊದಲಿಗೆ ದೆಹಲಿ, ಆ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್‌ ಸಿಕ್ಕಿ ಬಿದ್ದಿದ್ದಾರೆ. ಅದಾದ ಬಳಿಕ ಮುಂಬೈನಲ್ಲಿ ಚಿನ್ನ ಕಳ್ಳಸಾಗಣೆ ಮಾಡತ್ತಿದ್ದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ. ಈ ಮೂರು ಪ್ರಕರಣಗಳಲ್ಲಿ ಚಿನ್ನದ ಬಿಸ್ಕೇಟುಗಳನ್ನು ಕಳ್ಳಸಾಗಣೆ ಮಾಡಲಾಗಿದೆ. ಮೂರು ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿರುವ ಚಿನ್ನದ ಬಿಸ್ಕೆಟಿನ ಮಾದರಿಯೂ ಒಂದೇ ರೀತಿ ಇದೆ ಎಂಬುದು ತನಿಖಾಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ.
ಮಾ.2ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಮಯನಾರ್‌ನಿಂದ 2 ಕೆಜಿ, 158 ಗ್ರಾಂ ಚಿನ್ನವನ್ನು ಶೂನಲ್ಲಿ ಇರಿಸಿಕೊಂಡು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ನಂತರ ಮಾರ್ಚ್‌ 3 ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್‌ ಅನ್ನು ವಶಕ್ಕೆ ಪಡೆಯಲಾಗಿತ್ತು. ರನ್ಯಾ ರಾವ್‌ ಬಳಿ 14.2 ಕೆಜಿ ಚಿನ್ನದ ಬಿಸ್ಕೆಟ್‌ಗಳು ಪತ್ತೆಯಾಗಿದ್ದವು.ಬಳಿಕ ಮುಂಬೈ ಏರ್ಪೋರ್ಟ್‌ ನಲ್ಲಿ ಮತ್ತೆ ಗೋಲ್ಡ್ ಸ್ಮಗ್ಲಿಂಗ್‌ ಪತ್ತೆಯಾಗಿತ್ತು. ಕೆಜಿ ಗಟ್ಟಲೆ ಚಿನ್ನದ ಗಟ್ಟಿ ಸ್ಮಗ್ಲಿಂಗ್‌ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಡಿಆರ್‌ ಐ ಅಧಿಕಾರಿಗಳು, ದುಬೈನಿಂದ ಚಿನ್ನ ಸಾಗಿಸಿದ್ದ ಇಬ್ಬರು ವ್ಯಕ್ತಿಗಳು, ಒಂದೇ ವಾರದಲ್ಲಿ ಮೂರು ಕಡೆ ಕೆಜಿ ಕೆಜಿ ಗೋಲ್‌್ಡ ಸಗ್ಲಿಂಗ್‌ ಪ್ರಕರಣವನ್ನು ಡಿಆರ್‌ಐ ಅಧಿಕಾರಿಗಳು ಪತ್ತೆ ಮಾಡಿದ್ದರು.
ಹೀಗಾಗಿ ರನ್ಯಾರಾವ್‌ ಅವರಿಗೆ ಅಂತಾರಾಷ್ಟ್ರೀಯ ಗ್ಯಾಂಗ್‌ನೊಂದಿಗೆ ಸಂಬಂಧವಿರುವ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.
ರನ್ಯಾ ಹಾಗೂ ಇತರೆ ಕಳ್ಳಸಾಗಣೆದಾರರ ಹಿಂದೆ ದೊಡ್ಡ ಅಂತರಾಷ್ಟ್ರೀಯ ಸಿಂಡಿಕೇಟ್‌ ಇರಬಹುದು ಎಂಬ ಅನುಮಾನವೂ ಸಹ ಡಿಆರ್‌ಐ ಅಧಿಕಾರಿಗಳಿಗೆ ಕಂಡುಬಂದಿದೆ. ಏಕೆಂದರೆ ಈಗ ಪತ್ತೆ ಆಗಿರುವ ಮೂರು ಪ್ರಕರಣಗಳಲ್ಲಿಯೂ ಚಿನ್ನ ಕಳ್ಳಸಾಗಣೆದಾರರು ಬೇರೆ ಬೇರೆ ದೇಶಗಳಿಂದ ಚಿನ್ನವನ್ನು ತೆಗೆದುಕೊಂಡು ಭಾರತಕ್ಕೆ ಬಂದಿದ್ದಾರೆ.ಈ ಪ್ರಕರಣದಲ್ಲಿ ರನ್ಯಾ ಪಾತ್ರವೇ ಅಲ್ಲದೆ ಅವರ ಹಿಂದೆ ಹಲವರು ಇರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ನಟಿ ರನ್ಯಾರ ಎಲ್ಲ ವಿದೇಶ ಪ್ರವಾಸಗಳ ಮಾಹಿತಿಯನ್ನು ಹೊರತೆಗೆದಿದ್ದು, ರನ್ಯಾ ಹಲವಾರು ಬಾರಿ ವಿದೇಶ ಪ್ರವಾಸ ಮಾಡಿರುವುದು ಇದರಿಂದ ತಿಳಿದು ಬಂದಿದೆ. ರನ್ಯಾ ಪ್ರಸ್ತುತ ಡಿಆರ್‌ಐ ಅಧಿಕಾರಿಗಳ ವಶದಲ್ಲಿದ್ದು, ಮಾರ್ಚ್‌ 10 ಅಂದರೆ ನಾಳೆ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ. ರನ್ಯಾ, ನಾಳೆ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯೂ ಇದೆ.

 

Leave a Reply

Your email address will not be published. Required fields are marked *

error: Content is protected !!