ಉದಯವಾಹಿನಿ,ದುಬೈ : ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಏಷ್ಯಾ ಕಪ್ 2023 (Asia Cup 2023) ಪಂದ್ಯಾವಳಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸೋಮವಾರ ದೃಢಪಡಿಸಿದೆ. ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳೊಂದಿಗೆ ಪಂದ್ಯಾವಳಿ ಪ್ರಾರಂಭವಾಗಲಿದ್ದು, ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡಿರುವುದಾಗಿ ಎಸಿಸಿ ದೃಢಪಡಿಸಿದೆ. ಈ ವರ್ಷ ಏಕದಿನ ಮಾದರಿಯಲ್ಲಿ ನಡೆಯಲಿರುವ ಪಂದ್ಯಾವಳಿಯ ನಂತರ ಕೊನೆಯ ಒಂಬತ್ತು ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ. ಏಷ್ಯಾಕಪ್ 2023ರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ. 2022ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಶ್ರೀಲಂಕಾ ತಂಡ ಚಾಂಪಿಯನ್ ಆಗಿತ್ತು. ತನ್ನದೇ ನೆಲದಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ಆ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ. ಲೀಗ್ ಹಂತದಲ್ಲಿ ಭಾರತ ಪಾಕಿಸ್ತಾನ ಮತ್ತು ನೇಪಾಳ ಒಂದೇ ಗುಂಪಿನಲ್ಲಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಎರಡನೇ ಗುಂಪಿನಲ್ಲಿವೆ.
ಲೀಗ್ ಹಂತದ ಬಳಿ ಎರಡೂ ಗುಂಪುಗಳ ಎರಡು ತಂಡಗಳು ಸೂಪರ್ ಫೋರ್ ರೌಂಡ್ ರಾಬಿನ್ ಹಂತಕ್ಕೆ ಪ್ರವೇಶಿಸಲಿವೆ. ಅಲ್ಲಿ ಎರಡು ತಂಡಗಳು ನಂತರ ಫೈನಲ್ಗೆ ಹೋಗಲಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ಕ್ರಿಕೆಟ್ ತಂಡದ (Team India) ಪ್ರಮುಖ ಪ್ರಾಯೋಜಕತ್ವ ಹಕ್ಕುಗಳಿಗಾಗಿ ಆಸಕ್ತ ಉದ್ಯಮಗಳಿಂದ ಟೆಂಡರ್ ಆಹ್ವಾನಿಸಿದೆ. ಬ್ರಾಂಡಿಂಗ್ ವೆಚ್ಚದ ಕಡಿತವನ್ನು ಉಲ್ಲೇಖಿಸಿ ಎಜು-ಟೆಕ್ ಕಂಪನಿ ಬೈಜುಸ್ ಮಂಡಳಿಯೊಂದಿಗಿನ ತಮ್ಮ 35 ಮಿಲಿಯನ್ ಡಾಲರ್ ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದ ನಂತರ ಹೊಸ ಟೆಂಡರ್ಗಳನ್ನು ಆಯ್ಕೆ ಮಾಡಿಕೊಳ್ಳಲು ಹೇಳಿದೆ. ಇದೇ ವೇಳೆ ಕೆಲವೊಂದು ಬ್ರಾಂಡ್ಗಳಿಗೆ ನಿಷೇಧ ಹೇರಿದೆ. ಅವರಿಗೆ ಟೆಂಡರ್ ಹಾಕಲು ಅವಕಾಶ ಇಲ್ಲ. ಪ್ರಾಯೋಜಕತ್ವದ ಹಕ್ಕುಗಳಿಗಾಗಿ ಕೆಲವೊಂದು ಬ್ರಾಂಡ್ಗಳನ್ನು ಬಿಸಿಸಿಐ ನಿಷೇಧಿಸಿದೆ.
