ಉದಯವಾಹಿನಿ, ವಿಜಯಪುರ : ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್‌ನ ಭವ್ಯ ಮಧುರವರು ಜಿಲ್ಲಾ ಉಸ್ತುವಾರಿ ಸಚಿವರಾದ ಕೆಎಚ್ ಮುನಿಯಪ್ಪ ರವರನ್ನು ಅವರ ನಿವಾಸದಲ್ಲಿ ಪುರಸಭಾ ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರುಗಳೊಂದಿಗೆ ಭೇಟಿ ಮಾಡಿ ಸಚಿವರನ್ನು ಅಭಿನಂದಿಸಿ ಪುರಸಭೆಯ ಅಭಿವೃದ್ಧಿಗೆ ಅನುದಾನಗಳನ್ನು ಒದಗಿಸಿ ಕೊಡಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎಂ ಸತೀಶ್ ಕುಮಾರ್, ಮಂಜುಳಾ ಮುನಿರಾಜು, ಆಯೇಷ ಸೈಫ್ ಉಲ್ಲಾ,ಮಾಜಿ ಪುರಸಭಾ ಸದಸ್ಯರುಗಳಾದ ಮುನಿ ಚಿನ್ನಪ್ಪ, ಸಂಪತ್ ಕುಮಾರ್, ಮುನಿಕೃಷ್ಣ, ಹರೀಶ್, ಆರ್ ಮುನಿರಾಜು, ಮುಖಂಡರುಗಳಾದ ಚೇತನ್ ಗೌಡ, ಜಗನ್ನಾಥ್,ಶಿವಮೂರ್ತಿ,ಅಣ್ಣಮ್ಮ ತಾಯಿ ಸುರೇಶ್,ನಂಜಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಂದೇನಹಳ್ಳಿ ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು
