ಉದಯವಾಹಿನಿ , ಕೆ.ಆರ್ .ಪುರ: ಕೈವಾರ ತಾತಯ್ಯನವರು ಒಂದು ಜಾತಿಗೆ ಸೀಮಿತವಲ್ಲ , ಅವರ ತತ್ವ ಸಿದ್ಧಾಂತಗಳನ್ನು, ಯುವಜನತೆ ಜೀವನದಲ್ಲಿ ಅಳವಡಿಕೊಳ್ಳವ ಮೂಲಕ ಜೀವನದಲ್ಲಿ ಉನ್ನತಿ ಸಾದಿಸುವಂತೆ ಎಂದು ಶಾಸಕ ಬಿ.ಎ.ಬಸವರಾಜ ಅವರು ತಿಳಿಸಿದರು.
ಕೆಆರ್ ಪುರದ ಕೋಟೆ ದೇವಾಲಯದ ಬಳಿ ಶ್ರೀ ಮಾರುತಿ ಬಲಿಜ ಸಂಘದ ವತಿಯಿಂದ ಆಯೋಜಿಸಿದ್ದ ಸದ್ಗುರು ಶ್ರೀ ಯೋಗಿ ನಾರೇಯಣ ಯತೀಂದ್ರರ ೨೯೯ ನೇ ಜಯಂತಿಯ ಅಂಗವಾಗಿ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಲೋಕ ಕಲ್ಯಾಣಕ್ಕಾಗಿ ಕೈವಾರ ತಾತಯ್ಯನವರು ಮಾಡಿದ ಕಾರ್ಯಗಳು ಅಮೋಘ ಹಲವು ಲೋಕ ಕಲ್ಯಾಣಾರ್ಥವಾಗಿ ತಾತಯ್ಯ ಅವರು ಮಾಡಿರುವ ಕಾರ್ಯಗಳು ಶ್ಲಾಘನೀಯ ಎಂದು ತಿಳಿಸಿದರು.
ಶ್ರೀಯೋಗಿ ನಾರೇಯಣ ಅವರು ರಚಿಸಿರುವ ಕಾಲಜ್ಞಾನ ಸೂಕ್ತ ರೀತಿಯಲ್ಲಿ ಅಧ್ಯಯನ ನಡೆಸಿದರೆ ನಮಗೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ
ಕೈವಾರ ತಾತಯ್ಯನವರ ಕಾಲಜ್ಞಾನದ ಮಹತ್ವ ಮತ್ತು ವ್ಯಾಪ್ತಿ ಬಹಳ ಅಗಾದವಾದದ್ದು, ಅವರ ಚರಿತ್ರೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ, ಅವರು ಜಗತ್ತಿನ ಎಲ್ಲಾ ಆಗುಹೋಗುಗಳನ್ನೂ ಬಲ್ಲವರಾಗಿದ್ದರು.ಭವಿಷ್ಯದಲ್ಲಿ ಘಟಿಸಲಿರುವ ಅನಾಹುತ, ಆಗುಹೋಗುಗಳ ಮೊದಲಾದ ಘಟನೆಗಳ ಬಗ್ಗೆ ಕಾಲಜ್ಞಾನ ಮೂಲಕ ಎಚ್ಚರಿಸಿದರು, ನಮಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವರ ಕಾಲಜ್ಞಾನದ ಸೂಕ್ತ ಅಧ್ಯಯನವಾಗಬೇಕು ಎಂದು ಹೇಳಿದರು.
ಮಾಜಿ ಪಾಲಿಕೆ ಸದಸ್ಯ ಅಂತೋನಿಸ್ವಾಮಿ,ಮುಖಂಡರಾದ ವೇಣುಗೋಪಾಲ,ಸರಸ್ವತಮ್ಮ,ಗೋಪಿ ನಾಥ,ಮಾರ್ಕೆಟ್ ರಮೇಶ್, ಯಲ್ಲಪ್ಪ,ಕೆ.ಎನ್.ಮೋಹನ್,ಮಾರುತಿ ಬಲಿಜ ಸಂಘ ಶಿವಪ್ಪ, ವೇಣು,ಗಜೇಂದ್ರ,ಪಟಾಕಿ ರವಿ,ಡಿಸೇಲ್ ಮಂಜುನಾಥ, ರಮೇಶ್ ಇದ್ದರು.
