ಉದಯವಾಹಿನಿ, ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಮಣಂಕಲಗಿ ಗ್ರಾಮದಲ್ಲಿ ಚಿರತೆ ಪತ್ತೆಯಾಗಿದ್ದು, ಗ್ರಾಮಸ್ಥರ ನೆರವಿನಿಂದ ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆಹಿಡಿದಿದ್ದಾರೆ.
ಚಡಚಣ ತಾಲೂಕಿನ ಮಣಂಕಲಗಿ ಗ್ರಾಮದ ದ್ರಾಕ್ಷಿ ಹಾಗೂ ಜೋಳದ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು.
ಚಿರತೆ ಸೆರೆ ಹಿಡಿಯಲು ಜಮೀನು ಸುತ್ತ ಜನರು ನೆರೆದಿದ್ದರು. ಜೋಳದ ಜಮೀನನಲ್ಲಿ ಚಿರತೆ ಓಡಾಡಿ ಸ್ಥಳೀಯರ ಮೇಲೆ ದಾಳಿ ನಡೆಸಿತು. ಆಗ ಮಹಾದೇವ ಯಾದವಾಡ, ಈರಣ್ಣ ಮೇತ್ರಿ, ಸಂತೋಷ ತಾಂಬೆ, ಕಲ್ಲಪ್ಪ ಕೋಟ್ಯಾಳ ಎಂಬುವರಿಗೆ ಗಾಯಗಳಾಗಿದ್ದು, ಗಾಯಾಳುಗಳಿಗೆ ಚಡಚಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಮಹಾದೇವ ಯಾದವಾಡಗೆ ಗಂಭೀರ ಗಾಯಗಳಾಗಿದ್ದು, ಈರಣ್ಣ ಮೇತ್ರಿ, ಸಂತೋಷ ತಾಂಬೆಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ನಂತರ ಸ್ಥಳೀಯರ ನೆರವಿನಿಂದ ಬಲೆ ಹಾಕಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.
ಅರಣ್ಯ ಇಲಾಖೆಯವರಿಗೆ ಝಳಕಿ ಪೆÇಲೀಸರು ಸಾಥ್ ನೀಡಿದರು.
ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಇಲಾಖೆಯವರು ಬೋನಿಗೆ ಹಾಕಿದ್ದಾರೆ. ಇದರಿಂದ ಮಣಂಕಲಗಿ ಗ್ರಾಮದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಝಳಕಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
