ಉದಯವಾಹಿನಿ, ವಾಷಿಗ್ಟನ್ : ಐಸಿಸ್ ಸಂಘಟನೆಯ ಪ್ರಮುಖ ನಾಯಕನನ್ನು ನಿಖರ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಅಮೆರಿಕ ಘೋಷಿಸಿದೆ. ಇರಾಕ್‌ನ ಅಲ್ ಅನ್ವರ್ ಪ್ರಾಂತ್ಯದಲ್ಲಿ ನಡೆದ ನಿಖರ ವೈಮಾನಿಕ ದಾಳಿಯಲ್ಲಿ ಅಬು ಖದೀಜಾ ಎಂದೂ ಕರೆಯಲ್ಪಡುವ ಅಬ್ದಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇರಾಕ್ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದೊಂದಿಗೆ ಅಮೆರಿಕ ಘೋಷಿಸಿದೆ.
ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದರು ಮತ್ತು ಜಾಗತಿಕವಾಗಿ ಗುಂಪಿನ ಎರಡನೇ ಕಮಾಂಡ್ ಸ್ಥಾನವನ್ನು ಹೊಂದಿದ್ದರು. ಮಾರ್ಚ್ 13 ರಂದು ನಡೆದ ದಾಳಿಯಲ್ಲಿ ಮತ್ತೊಬ್ಬ ಐಸಿಸ್ ಉಗ್ರ ಕೂಡ ಸಾವನ್ನಪ್ಪಿದ್ದಾನೆ.
ಯುಎಸ್ ಮಿಲಿಟರಿ ಅಧಿಕಾರಿಗಳ ಪ್ರಕಾರ, ಅಬು ಖದೀಜಾ ಭಯೋತ್ಪಾದಕ ಗುಂಪಿನ ಲಾಜಿಸ್ಟಿಕ್ಸ್ ಯೋಜನೆ ಮತ್ತು ಹಣಕಾಸು ನಿರ್ವಹಣೆಯನ್ನು ವಿಶ್ವಾದ್ಯಂತ ಮೇಲ್ವಿಚಾರಣೆ ಮಾಡುತ್ತಿದ್ದರು. ವೈಮಾನಿಕ ದಾಳಿಯ ನಂತರ, ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ಮತ್ತು ಇರಾಕಿ ಪಡೆಗಳು ಸ್ಥಳಕ್ಕೆ ತಲುಪಿ ಅಬು ಖದೀಜಾ ಮತ್ತು ಇತರ ಐಸಿಸ್ ಹೋರಾಟಗಾರರ ಸಾವುಗಳನ್ನು ದೃಢಪಡಿಸಿದವು.

Leave a Reply

Your email address will not be published. Required fields are marked *

error: Content is protected !!