ಉದಯವಾಹಿನಿ, ವಿಜಯಪುರ : ಎಲ್ಲಾ ಹವನ- ಹೋಮ, ಪೂಜೆ- ಪುನಸ್ಕಾರ, ಜಪ- ತಪಗಳ ಎಲ್ಲಾ ಸಾರಗಳು, ಓಂ ನಮಃ ಶಿವಾಯ ಎಂದು ಹೇಳುವ ಶಿವ ಪಂಚಾಕ್ಷರಿ ಮಹಾಮಂತ್ರದಲ್ಲಿ, ರಾಮ ನಾಮ ಜಯ ಸಾರುವ ತಾರಕರಾಮ ಮಂತ್ರದಲ್ಲಿ ಅಡಗಿವೆ ಎಂದು ಸ್ಪಟಿಕಪುರಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿರವರು ತಿಳಿಸಿದರು.
ಅವರು ಇಲ್ಲಿನ ಗುರಪ್ಪನ ಮಠದಲ್ಲಿ ಶಿವಸಪ್ತಹ ಹಾಗೂ ಪ್ರಸನ್ನ ಶ್ರೀ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ಬ್ರಹ್ಮರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ದೇಶದ ೧೨ ಜ್ಯೋತಿಲಿಂಗಗಳಲ್ಲಿ ಒಂದಾಗಿರುವ ಓಂಕಾರೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು,ಇಲ್ಲಿನ ಮಠವನ್ನು ಕುಂಭೇಶಪುರಿ ಎಂತಲೂ, ಶಿರಾದಲ್ಲಿನ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠವನ್ನು ಸ್ಪಟಿಕಪುರಿ ಎಂತಲೂ ಕರೆಯಲಾಗುತ್ತಿದೆ ಎಂದು ತಿಳಿಸಿದರು.
ಶ್ರೀ ಓಂಕಾರೇಶ್ವರ ಸ್ವಾಮಿ ಒಕ್ಕಲಿಗರ ಪ್ರಶ್ನ ಟ್ರಸ್ಟ್ ನ ಕೇಶವಪ್ಪ, ಎಂ ವೀರಣ್ಣ, ವಿಎಂ ನಾಗರಾಜು, ಮಹೇಶ್, ಪುರಸಭಾ ಸದಸ್ಯರಾದ ಸಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!