ಉದಯವಾಹಿನಿ, ಬೆಂಗಳೂರು: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಅಂಬೇಡ್ಕರ್ ಅವರ ಏಳಿಗೆಯನ್ನು ಸಹಿಸದೆ, ಅವರನ್ನು ಹತ್ತಿಕ್ಕುವ ಕೆಲಸವನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ ಹಾಗೂ ಈ ಪಕ್ಷದ ನೇತಾರ ಪಂಡಿತ್ ಜವಾಹರ್ ಲಾಲ್ ನೆಹರು ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರು ಸಾವರ್ಕರ್ ಕುರಿತು ಮಾಡಿದ ಆರೋಪಕ್ಕೆ ಸುದೀರ್ಘ ಪ್ರತಿಕ್ರಿಯೆ ನೀಡಿರುವ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್.ಅವರ ವಿರುದ್ಧ ಅಭ್ಯರ್ಥಿ ಹಾಕಿದ್ದು, ಅವರ ಸೋಲಿಗೆ ಎಲ್ಲ ಬಗೆಯ ತಂತ್ರಗಾರಿಕೆ ಹೆಣೆದಿದ್ದು, ಎಲ್ಲಾ ಬಗೆಯ ಸಂಪನೂಲಗಳನ್ನು ಕೂಡಿಸಿ ನಾರಾಯಣ ಸದೋಬಾ ಕರ್ಜೋಲ್ಕರ್‌ಗೆ ಕೊಟ್ಟಿದ್ದು ಕಾಂಗ್ರೆಸ್ಸೇ. ಅಂಬೇಡ್ಕರ್ ಅವರನ್ನು ಸೋಲಿಸಿದ ಏಕೈಕ ಕಾರಣಕ್ಕೆ ಪದ ಭೂಷಣ ಪ್ರಶಸ್ತಿ ಕೊಟ್ಟಿದ್ದು ಈ ಕಾಂಗ್ರೆಸ್. ಇದಕ್ಕೆ ಎಲ್ಲ ತರಹದ ದಾಖಲೆಗಳಿವೆ. ಅವೆಲ್ಲ ಸಂಶೋಧಿತವಾಗಿ ದೃಢಪಟ್ಟಿದ್ದು, ಇದು ಐತಿಹಾಸಿಕ ಕರಾಳ ಸತ್ಯ ಸತ್ಯ ಸತ್ಯ ಎಂದು ಗುಡುಗಿದ್ದಾರೆ.
ಇಷ್ಟೆಲ್ಲಾ ಮಾಡಿದ ಕಾಂಗ್ರೆಸ್ ಇಂದು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ವೀರ ಸಾವರ್ಕರ್ ಅವರು ಸಂಚು ಮಾಡಿದ್ದಾರೆಂದು, ಸಂಶೋಧಿತವಾಗಿ ದೃಢಪಡದ ಯಾವುದೋ ದಾಖಲಾತಿಯನ್ನು ಹಿಡಿದು ಕೆಳಮನೆಯಲ್ಲಿ ಪ್ರಿಯಾಂಕ್ ಖರ್ಗೆ ಸುಳ್ಳು ಆಪಾದನೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ದೇಶಪ್ರೇಮವನ್ನೇ ಉಸಿರಾಗಿಸಿ, ಅದೇ ಭಾವವನ್ನು ಲೇಖನಿಯಾಗಿಸಿ, ಈ ದೇಶವನ್ನು ಕಟ್ಟಲು ಶ್ರಮಿಸಿದ ಮಹಾನ್ ಚೇತನಕ್ಕೆ, ಯಾರೇ ಸಂಚು ಮಾಡಿದರೂ ಅದು ತಪ್ಪೇ. ನನ್ನನ್ನು ಕೇಳುವುದಾದರೆ ಅದು ಪಂಡಿತ್ ಜವಾಹರ್‌ಲಾಲ್ ನೆಹರು ಆಗಿರಬಹುದು, ಇಲ್ಲ ಬೇರೆ ಯಾರೂ ಆಗಿರಬಹುದು ಅದು ತಪ್ಪು ತಪ್ಪೇ ಎಂದಿದ್ದಾರೆ.
