ಉದಯವಾಹಿನಿ, ಹಾವೇರಿ: ‘ಸ್ವಾತಿ ಬ್ಯಾಡಗಿಯವರ ಕೊಲೆ ನಡೆದು 16 ದಿನಗಳಾದರೂ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ, ಸಾಂತ್ರ್ಯನ ಹೇಳಲಿಲ್ಲ. ಅದೇ ಮುಸ್ಲಿಂ ಯುವತಿಗೆ ಈ ಸ್ಥಿತಿ ಬಂದಿದ್ದರೆ, ಇಡೀ ಕಾಂಗ್ರೆಸ್ ಸರ್ಕಾರವೇ ಮನೆಗೆ ಬಂದು ಬಿಡುತಿತ್ತು’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು. ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರಿನಲ್ಲಿರುವ ಸ್ಯಾತಿ ಅವರ ಮನೆಗೆ ಮಂಗಳವಾರ ಭೇಟಿ ನೀಡಿದ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ₹50 ಸಾವಿರ ನೆರವು ನೀಡಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸ್ವಾತಿ ಅವರ ತಾಯಿ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡಿ, ಜೀವನ ನಡೆಸುತ್ತಾರೆ. ಅವರ
ಬಡತನದ ಕಥೆ ಕೇಳಿ ಕಣ್ಣೀರು ಬಂತು. ಸ್ವಾತಿ ಅವರ ಹತ್ಯೆ ಖಂಡನೀಯ. ಈ ರೀತಿ ಹಿಂದೂ ಯುವತಿಯರನ್ನು ಕೊಲ್ಲುವವರನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಯಾಗಬೇಕು’ ಎಂದರು.
‘ಕಾಂಗ್ರೆಸ್ ಸರ್ಕಾರವು ಮುಸ್ಲಿಮರ ಗುಲಾಮಗಿರಿ ಮಾಡುತ್ತಿದೆ. ಮತಕ್ಕಾಗಿ ಮುಸ್ಲಿಂರನ್ನು ಓಲೈಸುತ್ತಿದೆ. ಸ್ಯಾತಿ ಅವರ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ ಎಚ್ಚೆತ್ತುಕೊಂಡಿಲ್ಲ. ಜಿಲ್ಲಾಧಿಕಾರಿಗೆ ತಹಶೀಲ್ದಾರ್ ಈವರೆಗೆ ವರದಿ ನೀಡಿಲ್ಲ. ಇಂಥ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು. ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವಕಾಂಗ್ರೆಸ್ ಸೇರಲು ಆಹ್ವಾನಗಳಿದ್ದು, ಎಂದಿಗೂ ನಾನು ಸೇರುವುದಿಲ್ಲ. ನಾನು ಅಪ್ಪಟ ಹಿಂದೂ-ಮೂಲ ಬಿಜೆಪಿಗ, ಬಿಜೆಪಿ ಶುದ್ದೀಕರಣಗೊಳ್ಳುವ ಕಾಲಕ್ಕಾಗಿ ಕಾಯುತ್ತಿದ್ದೇನ
