ಉದಯವಾಹಿನಿ, ಬೆಂಗಳೂರು: ಕೃಷ್ಣಾ ಮೇಲ್ಮಂಡೆ ಯೋಜನೆ ಹಂತ-೩ರ ಪರಿಷ್ಕೃತ ಅಂದಾಜು ಮೊತ್ತವು ಹೆಚ್ಚಳವಾಗಿದ್ದು,೧೭೦೦ ಕೋಟಿ ರೂ. ಅನುದಾನವನ್ನು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಪರಿಷತ್ ನಲ್ಲಿ ತಿಳಿಸಿದ್ದಾರೆ.
ಕೃಷ್ಣಾ ಮೇಲ್ಮಂಡೆ ಯೋಜನೆ ಹಂತ-೩ರ ಪರಿಷ್ಕೃತ ಅಂದಾಜು ಮೊತ್ತವು ಸುಮಾರು ೮೭, ೮೧೮.೮೨ ಕೋಟಿ ರೂಗಳಿಗೆ ಹೆಚ್ಚಳವಾಗಿದೆ ಎಂದು ಪ್ರಶೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ವಿ.ಎಚ್. ಪೂಜಾರ್ ಅವರ ಪ್ರಶ್ನೆಗೆ ಉತ್ತರಿಸಿದರು.
೨೦೨೪-೨೫ನೇ ಸಾಲಿನ ದರಪಟ್ಟಿ ಹಾಗೂ ೨೦೨೩ರ ಜನವರಿ ೨೫ರ ಕಂದಾಯ ಇಲಾಖೆಯ ಆದೇಶದ ಒಪ್ಪಂದದ ದರ ಸೇರಿ ಈ ಪ್ರಮಾಣದ ಮೊತ್ತವಾಗಿದ್ದು ಬಜೆಟ್ ನಲ್ಲಿ ೧೭೦೦ ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ೨೦೨೪-೨೫ ಸಾಲಿನ ಆಯವ್ಯಯದಲ್ಲಿ ೧೨೦೦ ಕೋಟಿ ರೂ., ೨೦೨೫ ೨೬ನೇ ಸಾಲಿನ ಆಯವ್ಯಯದಲ್ಲಿ ೧೭೦೦ ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.
೨೦೨೪ರ ಡಿಸೆಂಬರ್ ೧೬ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಕೃಷ್ಣಾ ಮೇಲ್ಕಂಡೆ ಯೋಜನೆಯ ಹಂತ-೨ರ ಭೂಸ್ವಾಧೀನ, ಪುನರ್ ವಸತಿ, ಪುನರ್ ನಿರ್ಮಾಣದ ವಿಷಯಗಳ ಕುರಿತು ಬಾಗಲಕೋಟಿ, ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಯೋಜನೆಯ ಮುಳುಗಡೆ ಸಂತ್ರಸ್ತರೊಂದಿಗೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಒಪ್ಪಂದದ ಐತೀರ್ಪಿನ ಪರಿಷ್ಕರಣ, ಯೋಜನೆಯ ಪರಿಷ್ಕೃತ ಅಂದಾಜು ಪ್ರಸ್ತಾವನೆ ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ಅಂಶಗಳು ಮತ್ತು ಇನ್ನಿತರೆ ಅಗತ್ಯ ನಿರ್ಣುಗಳ ಕುರಿತು ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಮಂಡಿಸಲು ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!