ಉದಯವಾಹಿನಿ, ಬಳ್ಳಾರಿ: ನಗರದಲ್ಲಿ ಈ ವರ್ಷದ ಮೊದಲ ಮಳೆ ನಿನ್ನೆ ಸಂಜೆ ಬಿದ್ದು ಬಿಸಿಲ ನಾಡಲ್ಲಿ ಒಂದಿಷ್ಟು ತಂಪು ತಂದಿದೆ.
ಕಳೆದ ಮೂರು ದಿನಗಳಿಂದ ಬಿಸಿಲ ಝಳ ಹೆಚ್ಚಿತ್ತು. ಇದರಿಂದಾಗಿ ಮೊನ್ನೆ ರಾತ್ರಿ ರಾಜ್ಯದ ಹಲವಡೆ ಮಳೆಯಾಗಿತ್ತು. ನಿನ್ನೆ ಮಧ್ಯಾಹ್ನದವರೆಗೂ ಬಿಸಿಲಿತ್ತು ನಂತರ ಒಂದಿಷ್ಟು ಮೋಡ ಮುಚ್ಚಿ ಬಳಿಕ ಸಂಜೆ ಮಳೆ ಬಿತ್ತು. ಕೆಲ ಕಾಲ ಸುರಿಯಿತು.
ಇದು ಮುಂಗಾರಿನ ಮೊದಲ ಮಳೆಯಾಗಿದೆ. ಈ ವರ್ಷವೂ ಉತ್ತಮ ಮಳೆಯಾಗುತ್ತದೆಂದು ಹೇಳಲಾಗುತ್ತಿದೆ.
ಬಿಸಿಲಿ ತಾಪಕ್ಕೆ ಈ ಮಳೆ ಸಹಕಾರಿಯಾದರೆ. ಈಗಾಗಲೇ ಬೆಲೆ ಕುಸಿತದಿಂದ ಕಂಗಾಲಾಗಿರುವ ಒಣ ಮರಣಸಿನಕಾಯಿ ಬೆಳೆದ ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಿಡಿಸದೇ ಇನ್ನು ಗಿಡದಲ್ಲಿರುವ ಮೆಣಸಿನಕಾಯಿ ಮೇಲೆ ಮಳೆ ಬಿದ್ದರೆ ಕಲರ್ ಕೆಡುತ್ತದೆ. ಅಲ್ಲದೆ ಗುಣ ಮಟ್ಡ ಕಳೆದುಕೊಂಡು ಮತ್ತಷ್ಟು ಬೆಲೆ ಕಡಿಮೆ ಕಾರಣವಾಯ್ತು ಈ ಮಳೆ. ಮತ್ತೊಂದು ಕಡೆ ಈಗಾಗಲೇ ಬಿಡಿಸಿ ಒಣಗಿಸಲು ಒಂದು ಕಡೆ ಸಂಗ್ರಹಿಸಿ ಇಟ್ಟಿದ್ದ ಮೆಣಸಿನಕಾಯಿ ಮಂಡೆಗೆ ನೀರು ಹೋಗದಂತೆ ಮುಚ್ಚುವ ಮುನ್ನ ಅಕಾಲಿಕ ಮಳೆ ಬಿದ್ದು. ಮೆಣಸಿನಕಾಯಿ ಮರನೆಯುವಂತೆ ಆಯ್ತು. ವಾತಾವರಣಕ್ಕೆ ಸಹಕಾರಿಯಾದರೂ ಮೆಣಸಿನಕಾಯಿ ಬೆಳೆಗಾರರಿಗೆ ಶಾಪವಾಯ್ತು ಎನ್ನಬಹುದು.
