ಉದಯವಾಹಿನಿ, ಬೆಂಗಳೂರು: ಹೊಸದಾಗಿ ಮೀಟರ್‌ಗಳನ್ನು ಅಳವಡಿಸಿಕೊಳ್ಳುವವರಿಗೆ ಮಾತ್ರ ಸ್ಮಾರ್ಟ್ ಮೀಟರ್‌ ವ್ಯವಸ್ಥೆ ಜಾರಿ ಮಾಡಲಾಗುವುದು, ಯಾರಿಗೂ ಬಲವಂತ ಮಾಡಲ್ಲ ಎಂದು ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೆಶಕ ಪಂಕಜ್‌ ಕುಮಾರ್‌ ಪಾಂಡೆ ತಿಳಿಸಿದರು. ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಮತ್ತು ಪೂರೈಕೆ ವ್ಯವಸ್ಥೆ ಹೇಗಿದೆ ಎಂಬುದನ್ನು ತಿಳಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು, ಸಾರ್ಟ್‌ ಮೀಟರ್‌ ಯೋಜನೆ ಕೇಂದ್ರ ಸರ್ಕಾರದ್ದು, ಅದರಲ್ಲಿನ ಕೆಲವು ಲೋಪದೋಷಗಳಿಂದ ರಾಜ್ಯಸರ್ಕಾರ ಒಪ್ಪಿಕೊಂಡಿರಲಿಲ್ಲ.
ಕೆಲವು ನಿಬಂಧನೆಗಳಂತೆ ಆರ್‌.ಡಿ.ಎಸ್‌‍. ಎಸ್‌‍ ಯೋಜನೆಯಡಿಯಲ್ಲಿ ಹೊಸ ಮೀಟರ್‌ ವ್ಯವಸ್ಥೆಯನ್ನು ಜಾರಿ ಮಾಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಒಟ್ಟಿಗೆ ಹಳೆ ಮೀಟರಗಳನ್ನು ತೆಗೆದು ಹೊಸ ಸಾರ್ಟ್‌ ಮೀಟರ್‌ಗಳನ್ನು ಅಳವಡಿಸಿಕೊಳ್ಳವ ವ್ಯವಸ್ಥೆ ಇದೆ ಎಂದು ಸಮಜಾಯಿಸಿ ನೀಡಿದರು.
ಈ ಪದ್ದತಿಯನ್ನು ಕರ್ನಾಟಕದಲ್ಲಿ ತಿರಸ್ಕರಿಸಿದ್ದೇವೆ. ಅದರ ಬದಲಾಗಿ ಹೊಸೆ ಮನೆ ಕಟ್ಟಿದಾಗ ಮತ್ತು ಹಳೆ ಮೀಟರುಗಳು ದುರಸ್ತಿಗೆ ಒಳಪಟ್ಟಾಗ ಮಾತ್ರ ಸಾರ್ಟ್‌ ಮೀಟರ್‌ ಅಳವಡಿಸಿಕೊಳ್ಳಲು ಗ್ರಾಹಕರಿಗೆ ತಿಳಿಸಿದ್ದೇವೆ. ಹಳೆ ಮೀಟರಗಳು ಹಾಗೆ ಇರುತ್ತವೆ ಎಂದರು ಹೊಸ ಸಾರ್ಟ್‌ ಮೀಟರ್‌ ಅಳವಡಿಸಿಕೊಳ್ಳಲು ಗ್ರಾಹಕರು 5000 ರೂಗಳನ್ನು ಕಟ್ಟಿ ನಂತರ ಇದರಲ್ಲಿನ ತಂತ್ರಜ್ಞಾನ ಅಳವಡಿಕೆಯ ಕಾರಣದಿಂದಾಗಿ ಅದರ ನಿರ್ವಹಣೆಗಾಗಿ ಹತ್ತು ವರ್ಷಗಳ ಕಾಲ 116ಗಳನ್ನು ಪ್ರತಿ ತಿಂಗಳು ಪಾವತಿಸಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!