ಉದಯವಾಹಿನಿ, ಶ್ರೀರಂಗಪಟ್ಟಣ: ಮನೆಯಲ್ಲಿ ಕಟ್ಟಿದ್ದ 10 ಮೇಕೆಗಳನ್ನು ಕಳ್ಳರು ಕದ್ದೊಯ್ದಿರುವ ಪ್ರಕರಣ ತಾಲ್ಲೂಕಿನ ಗಣಂಗೂರು ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಗ್ರಾಮದ ಅರುಣಕುಮಾರ್ ಅವರ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಕೂಡಿ ಹಾಕಿದ್ದ ಮೇಕೆಗಳನ್ನು ಕಳವು ಮಾಡಲಾಗಿದೆ.
ಸಿದ್ಧಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದ ಮನೆಯಲ್ಲಿದ್ದ 6 ದೊಡ್ಡದು ಹಾಗೂ 4 ಸಣ್ಣ ಮೇಕೆಗಳನ್ನು ಕದ್ದಿದ್ದಾರೆ. ಸುಮಾರು ರಾತ್ರಿ 12ರಿಂದ 2 ಗಂಟೆ ನಡುವೆ ಕಳವು ಪ್ರಕರಣ ನಡೆದಿದೆ. 70 ಸಾವಿರ ಬೆಲೆಯ ಮೇಕೆಗಳು ಕಳವಾಗಿದ್ದು ಹುಡುಕಿಕೊಡಬೇಕು ಎಂದು ಅರುಣಕುಮಾರ್ ಅವರ ಪತ್ನಿ ಎಸ್.ಬಿ. ಲಲಿತಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!