ಉದಯವಾಹಿನಿ, ಶಿರಹಟ್ಟಿ: ತಾಲ್ಲೂಕಿನ ಪರಸಾಪೂರ ಗ್ರಾಮದಲ್ಲಿ ಹೈಪವರ್ ವಿದ್ಯುತ್ ತಂತಿ ತಗುಲಿದ ಪರಿಣಾಮ ಬುಧವಾರ ಎರಡು ಎಮ್ಮೆಗಳು ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಮಂಗಳವಾರ ತಡರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಗ್ರಾಮದ ಹೊರವಲಯದ ಜಮೀನಿನೊಂದರಲ್ಲಿ ಹಾದು ಹೋದ ಹೈಪವರ್ ವಿದ್ಯುತ್ ತಂತಿಗಳು ಹರಿದು ಬಿದ್ದಿವೆ.
ಬುಧವಾರ ಮಧ್ಯಾನ್ನ ಎಮ್ಮೆಗಳು ಮೇಯಲು ಹೋದಾಗ ಆಕಸ್ಮಿಕ ತಂತಿ ತಗುಲಿದ ಪರಿಣಾಮ ಎಮ್ಮೆಗಳು ಸಾವನ್ನಪ್ಪಿವೆ.
ರೈತ ಶರಣಪ್ಪ ವೆಂಕಪ್ಪ ಈಳಿಗೇರ ಎಂಬುವರಿಗೆ ಸೇರಿದ ಎಮ್ಮೆಗಳಾಗಿದ್ದು, ಸುದ್ದಿ ತಿಳಿಯುತ್ತಲೇ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮುಂದಾಗುವ ಅನಾಹುತ ತಪ್ಪಿಸಿದ್ದಾ
