ಉದಯವಾಹಿನಿ, ಬೆಂಗಳೂರು: ಕೋರಮಂಗಲದ ಸಂತ ಫ್ರಾನ್ಸಿಸ್ ಕಾಲೇಜಿನ ಮೂರು ವಿದ್ಯಾರ್ಥಿನಿಯರು ಓರಿಸ್ಸಾದ ಸೀತಾಪುರದಲ್ಲಿನ ಸೆಂಚುರಿಯನ್ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್ ೧ ರಿಂದ ೫ರವರೆಗೆ ನಡೆಯಲಿರುವ ಮೂರನೇ ಎ.ಐ.ಯು. ರಾಷ್ಟ್ರ ಮಟ್ಟದ ಮಹಿಳಾ ವಿದ್ಯಾರ್ಥಿ ಪಾರ್ಲಿಮೆಂಟ್ ಸ್ಪರ್ಧೆಗೆ ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿಲು ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಅಲಿ ಬಿಲ್ಕಿಷ್, ಹರ್ಷಿತಾ ಆರ್ ಮತ್ತು ಇಶಿಕಾ ಜೈನ್ ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿರುವ ವಿದ್ಯಾರ್ಥಿಗಳಾಗಿದ್ದು, ಡಾ. ಹರೀಶ್ ರವರು ಈ ತಂಡಕ್ಕೆ ತರಬೇತಿಯನ್ನು ನೀಡಿರುತ್ತಾರೆ.
ತಂಡವು ಇಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸುತ್ತಿದ್ದು, ಕಾಲೇಜಿನ ನಿರ್ದೇಶಕರಾದ ಬ್ರದರ್ ಪೀಟರ್, ಉಪನಿರ್ದೇಶಕರಾದ ಬ್ರದರ್ ಡಾ. ಟೈಟಸ್, ಪ್ರಾಂಶುಪಾಲರಾದ ಡಾ. ಆರ್. ಎನ್. ಸುಬ್ಬರಾವ್, ಉಪಪ್ರಾಂಶುಪಾಲರಾದ ಡಾ. ಕಾರ್ತಿಕ್ ಪಿ ಹಾಗೂ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂಧಿ ವರ್ಗದವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
